ಕನ್ನಡದ ‘ಇಸ್ಮಾರ್ಟ್ ಜೋಡಿ’ ಕಾರ್ಯಕ್ರಮದಲ್ಲಿ ನಟಿ ಸ್ವಪ್ನಾ ದೀಕ್ಷಿತ್ ತನ್ನ ಪತಿ ಕಳೆದ 16 ವರ್ಷದಿಂದ ಕುಲಿತು ತಿನ್ನುತ್ತಿದ್ದಾರೆ ಎಂದು ಹೇಳಿ ಕಣ್ಣೀರಾಗಿದ್ದಾರೆ.
ಮದುವೆಯಾಗಿ 19 ವರ್ಷವಾಗಿದೆ. ಆದರೆ ನನ್ನ ಪತಿ ಅಶ್ವಿನ್ 16 ವರ್ಷದಿಂದ ಕೆಲಸಕ್ಕೆ ಹೋಗುತ್ತಿಲ್ಲ. ಇಡೀ ಕುಟುಂಬವನ್ನು ನಾನೇ ನಿರ್ವಹಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ನನ್ನ ಗಂಡ ನನಗೆ ಹೀರೊ ಆದರೂ ಸಮಾಜದಲ್ಲಿ ಅವರಿಗೆ ಅಂತಾ ಒಂದು ಗೌರವ ಬೇಡ್ವಾ ಎಂದು ನೋವು ತೋಡಿಕೊಂಡಿದ್ದಾರೆ. ಇನ್ನು ಈ ಮಾತು ಕೇಳಿದ ಅಶ್ವಿನ್ ಈ ಮಾತು ಈಗ ಬೇಕಿರಲಿಲ್ಲ. ನನ್ನ ಕಾಲ ಮೇಲೆ ಚಪ್ಪಡಿ ಹಾಕಿಬಿಟ್ಟಳು ಎಂದು ಅಶ್ವಿನ್ ನೊಂದುಕೊಂಡಿದ್ದಾರೆ.
PublicNext
06/08/2022 10:34 am