ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಬುಲೆಟ್ ಪ್ರೂಫ್ ಕಾರು ಖರೀದಿಸಿದ್ದಾರೆ.ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಟೀಮ್ ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ಸಲ್ಲು ಸ್ವತಂತ್ರವಾಗಿ ಓಡಾಡಲು ತೊಂದರೆಯಾಗುತ್ತಿದೆ. ಜೀವ ಬೆದರಿಕೆ ಪತ್ರಗಳು, ಮಸೇಜ್ ಗಳಿಂದ ಕಿರಿಕಿರಿಯಿಂದ ಮುಂಬೈ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ, ಗನ್ ಇಟ್ಟುಕೊಳ್ಳಲು ಅನುಮತಿ ಕೊಡಿ ಎಂದು ಮನವಿ ಮಾಡಿದ್ದರು.
ಅಲ್ಲದೇ, ಸಲ್ಮಾನ್ ಖಾನ್ ಮನೆಗೆ ಬಿಗಿಭದ್ರತೆಯನ್ನು ಗೃಹ ಇಲಾಖೆ ಆಯೋಜನೆ ಮಾಡಿದೆ, ಅಲ್ಲದೇ, ಸಲ್ಮಾನ್ ಗೆ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗಿಯಾಗದಂತೆ ಮತ್ತು ಅತೀ ಹೆಚ್ಚು ಜನಸಂದಣಿ ಇರುವ ಕಡೆ ಓಡಾಡದಿರಲು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತದೆ.
ಪೊಲೀಸರ ಸಲಹೆ ಮೇರೆಗೆ ಮತ್ತು ತಮಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ಸಲ್ಮಾನ್ ಖಾನ್ ಬುಲೆಟ್ ಪ್ರೂಫ್ ಕಾರು ಖರೀದಿಸಿದ್ದಾರೆ ಎಂದು ಹೇಳಲಾಗುತ್ತದೆ. ಮನೆಯಿಂದ ಆಚೆ ಬಂದರೆ, ಅದೇ ಕಾರಿನಲ್ಲೇ ಇನ್ಮುಂದೆ ಅವರು ಓಡಾಡಲಿದ್ದಾರೆ. ಸಲ್ಮಾನ್ ಖಾನ್ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಂಚಾರ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಇಂಥದ್ದೊಂದು ಕಾರು ಖರೀದಿಸಿದ್ದಾರೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
PublicNext
31/07/2022 07:58 pm