ಇಂದೋರ್ (ಮಧ್ಯಪ್ರದೇಶ): ರಣವೀರ್ ಸಿಂಗ್ ಇತ್ತೀಚೆಗೆ ಮ್ಯಾಗಜೀನ್ ವೊಂದಕ್ಕಾಗಿ ಬೆತ್ತಲೆಯಾಗಿ ಫೋಟೋಶೂಟ್ ಮಾಡಿಸಿಕೊಂಡು ಸುದ್ದಿಯಾಗಿದ್ದರು. ತಮ್ಮ ನಗ್ನ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿಯೂ ಪ್ರಕಟಿಸಿದ್ದರು. ಸದ್ಯ ನಗ್ನ ಫೋಟೋ ವೈರಲ್ ಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮಂಗಳವಾರ ಎಫ್ ಐಆರ್ ದಾಖಲಿಸಿದ್ದಾರೆ.ಇದರ ಮಧ್ಯೆ ಇಂದೋರ್ ನಲ್ಲಿ ರಣವೀರ್ ಸಿಂಗ್ ಗಾಗಿ ಎನ್ ಜಿಒವೊಂದು ಹಳೆಯ ಬಟ್ಟೆ ದೇಣಿಗೆ ಅಭಿಯಾನ ಆರಂಭಿಸಿದೆ.
'ನೇಕಿ ಕಿ ದೀವಾರ್' ಎಂಬ ಸಾಮಾಜಿಕ ಸಂಸ್ಥೆಯು ಹಳೆಯ ಬಟ್ಟೆಗಳನ್ನು ರಣವೀರ್ ಸಿಂಗ್ ಗೆ ದಾನ ಮಾಡುವ ಪ್ರಯತ್ನದಲ್ಲಿದ್ದು ಜನರಿಂದ ಬಟ್ಟೆ ಸಂಗ್ರಹಿಸಿದೆ. ಸದ್ಯ ಎನ್ ಜಿಒ ಬಟ್ಟೆ ಸಂಗ್ರಹಿಸುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರತಿಭಟನಾಕಾರರು ಪೆಟ್ಟಿಗೆಯೊಂದನ್ನು ಇಟ್ಟುಕೊಂಡು, "ಮೇರೆ ಸ್ವಚ್ಛ ಇಂದೋರ್ ನೆ ಥಾನಾ ಹೈ, ದೇಶ್ ಸೇ ಮಾನ್ಸಿಕ್ ಕಚ್ರಾ ಭಿ ಹತಾನಾ ಹೈ (ನಮ್ಮ ಇಂದೋರ್ ನಗರವು ಸ್ವಚ್ಛವಾಗಿದೆ. ಹಾಗೆಯೇ ದೇಶದಲ್ಲಿರುವ ಮಾನಸಿಕ ವ್ಯಕ್ತಿಗಳು (ಕಸವನ್ನು) ಕಿತ್ತೊಗೆಯಬೇಕಿದೆ)" ಎಂದು ಬರೆಯಲಾದ ಬ್ಯಾನರ್ ಹಾಕಿದ್ದಾರೆ.
PublicNext
26/07/2022 07:06 pm