ಕಾಫಿ ವಿತ್ ಕರಣ್ ಶೋಗೆ ಅತಿಥಿಯಾಗಿ ಬಂದ ಸಮಂತಾ ಮತ್ತು ಅಕ್ಷಯ್ ಕುಮಾರ್ ವಿಡಿಯೋ ಸಿಕ್ಕಪಟ್ಟೆ ವೈರಲ್ ಆಗಿದೆ. ಸಮಂತಾರನ್ನು ಎತ್ತಿಕೊಂಡೆ ಅಕ್ಷಯ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಇವರಿಬ್ಬರ ಕೆಮಿಸ್ಟ್ರಿ ಸರಿಯಾಗಿ ವರ್ಕ್ ಆಗಿದೆ ಎಂದಿದ್ದಾರೆ.
ಪುಷ್ಪಾ ಸಿನಿಮಾದಲ್ಲಿ ಸೊಂಟಬಳುಕಿಸಿದ ಬಳಿಕ ಸಮಂತಾ ಹವಾ ಹೆಚ್ಚಾಗಿದೆ. ಸದ್ಯ ಪುಷ್ಪಾ ಚಿತ್ರದ ಊ ಅಂಟಾವಾ ಮಾಮಾ..ಸಾಂಗೆ ಅಕ್ಷಯ ಸಮಂತಾ ಹೆಜ್ಜೆ ಹಾಕಿದ್ದು ಫ್ಯಾನ್ಸ್ ಮನ ಗೆದ್ದಿದ್ದಾರೆ. ಅಕ್ಷಯ್ ಕೊನೆಯದಾಗಿ ಸಾಮ್ರಾಟ್ ಪೃಥ್ವಿರಾಜ್ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.
ಇನ್ನು ನಟಿ ಸಮಂತಾ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಶಾಕುಂತಲಂ, ಯಶೋಧ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದೆ.
PublicNext
22/07/2022 04:05 pm