ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿತ್ಯಾನಂದರನ್ನು ಮದ್ವೆಯಾಗುವ ಆಸೆಯಂತೆ ಕಾಲಿವುಡ್‌ನ ಈ​ ಬ್ಯೂಟಿಗೆ

ಚೆನ್ನೈ: ಹುಭಾಷಾ ನಟಿ ಪ್ರಿಯಾ ಆನಂದ್ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದು, ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಮೆರಿಕದಲ್ಲಿ ಬೆಳೆದ ಈ ಚೆಲುವೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಜೇಮ್ಸ್ ಸೇರಿದಂತೆ ಕನ್ನಡದ ಕೆಲ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆಯೂ ಇವರದ್ದು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪ್ರಿಯಾ ಆನಂದ್ ತಮ್ಮ ಮದುವೆಯ ಬಗ್ಗೆ ಕೆಲವು ಆಸಕ್ತಿದಾಯಕ ಮಾತುಗಳನ್ನು ಆಡಿದ್ದಾರೆ.

'ನಾನು ನಿತ್ಯಾನಂದರನ್ನು ತುಂಬಾ ಇಷ್ಟಪಡುತ್ತೇನೆ. ನನ್ನ ಹೆಸರು ಪ್ರಿಯಾ ಆನಂದ. ಒಂದು ವೇಳೆ ನಾನು ನಿತ್ಯಾನಂದರನ್ನು ಮದುವೆಯಾದರೆ, ನನ್ನ ಹೆಸರನ್ನು ಬದಲಾಯಿಸಲೇಬೇಕಿಲ್ಲ. ನಿತ್ಯಾನಂದರಿಗೆ ಜನರನ್ನು ಹೇಗೆ ಆಕರ್ಷಿಸಬೇಕೆಂದು ತಿಳಿದಿದೆ. ಇಷ್ಟು ಜನ ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದರೆ ಅವರಲ್ಲಿ ಏನೋ ಇದೆ ಎಂದರ್ಥ' ಎಂದು ಪ್ರಿಯಾ ಹೇಳಿದ್ದಾರೆ.

ಪ್ರಿಯಾ ಅವರ ಸಂದರ್ಶನದ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಟ್ರೋಲ್​ ಸಹ ಆಗುತ್ತಿದೆ. ಪ್ರಿಯಾ ಅವರು ಶೂಟಿಂಗ್​ ಸೆಟ್‌ಗಳಲ್ಲಿ ಮಾಡುವ ತಮಾಷೆಗಳಿಂದಲೇ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ವಿವಾದಿತ ದೇವಮಾನವ ನಿತ್ಯಾನಂದರ ಬಗ್ಗೆ ಅವರು ಮಾತನಾಡಿರುವ ಮಾತು ಕೆಲವರಲ್ಲಿ ನಗು ತರಿಸಿದೆ.

Edited By : Vijay Kumar
PublicNext

PublicNext

09/07/2022 03:00 pm

Cinque Terre

80.84 K

Cinque Terre

12