ದೊಡ್ಡಬಳ್ಳಾಪುರ: ರಂಗಭೂಮಿ ಮಹಾನ್ ಕಲಾವಿದ ಗುಬ್ಬಿ ವೀರಣ್ಣ ಪುತ್ರಿ ಜಿ.ವಿ.ಹೇಮಲತಾ ಅವ್ರು ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ನಟಿ ಹೇಮಲತಾ ಅವರಿಗೆ ಕಳೆದ ಎರಡು ದಿನಗಳ ಹಿಂದೆ ಲಘು ಹೃದಯಾಘಾತ ಆಗಿತ್ತು.ಬಾಶೆಟ್ಟಿಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಹೇಮಲತಾ ಅವರಿಗೆ ಚಿಕಿತ್ಸೆ ಕೂಡ ಕೊಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.
70 ವರ್ಷದ ಹೇಮಲತಾ ಅವ್ರು ಡಾಕ್ಟರ್ ರಾಜಕುಮಾರ್ ಅಭಿನಯ ಎಮ್ಮೆ ತಿಮ್ಮಣ್ಣ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಕಲ್ಯಾಣ ಕುಮಾರ್ ಅಭಿನಯದ ಕಲಾವತಿ ಚಿತ್ರದಲ್ಲಿ ನಾಯಕಿಯಾಗಿಯೇ ನಟಿಸಿದ್ದಾರೆ.
ಮೂಲತಃ ಭರತನಾಟ್ಯ ಕಲಾವಿದೆಯಾಗಿದ್ದ ಹೇಮಲತಾ ಅವರಿಗೆ ಮೂವರು ಮಕ್ಕಳ್ಳಿದ್ದಾರೆ. ಅವರೆಲ್ಲ ಈಗ ಅಮೆರಿಕಾದಲ್ಲಿಯೇ ನೆಲೆಸಿದ್ದಾರೆ.
PublicNext
02/07/2022 04:50 pm