ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಭೇಟಿಯಾಗಿದ್ದಾರೆ.
`ಸರ್ಕಾರು ವಾರಿ ಪಾಟ’ ಯಶಸ್ಸಿನ ನಂತರ ತಮ್ಮ ಕುಟುಂಬದ ಜತೆ ವಿದೇಶಕ್ಕೆ ಹಾರಿರುವ ಪ್ರಿನ್ಸ್ ಮಡದಿ ನಮೃತಾ ಜೊತೆ ಉದ್ಯಮಿ ಬಿಲ್ ಗೇಟ್ಸ್ ಅವರನ್ನು ಮಹೇಶ್ ಬಾಬು ಭೇಟಿಯಾಗಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
`ಮಾನ್ಯ ಬಿಲ್ ಗೇಟ್ಸ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಪ್ರಪಂಚ ಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ಇವರು ಒಬ್ಬರು. ನಿಜಕ್ಕೂ ಇವರೂ ಸ್ಪೂರ್ತಿ’ ಎಂದು ಮಹೇಶ್ ಬಾಬು ಬರೆದುಕೊಂಡಿದ್ದಾರೆ.
PublicNext
29/06/2022 05:28 pm