ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈಗ ನೆಲೆ ಕಂಡುಕೊಂಡ ಭಾವನೆ ಮೂಡಿದೆ ಎಂದ ವಿಕ್ಕಿ ಕೌಶಲ್

ಮುಂಬೈ: ಬಾಲಿವುಡ್‌ ನಟ ವಿಕ್ಕಿ ಕೌಶಲ್​ ಹಾಗೂ ನಟಿ ಕತ್ರಿನಾ ಕೈಫ್ ಮದುವೆಯಾಗಿ ಆರು ತಿಂಗಳ ಮೇಲಾಗಿದೆ. ಕತ್ರಿನಾಗಿಂತ ವಿಕ್ಕಿ ವಯಸ್ಸಿನಲ್ಲಿ ಚಿಕ್ಕವರು. ಆದರೆ ಇವರ ಪ್ರೀತಿಗೆ ವಯಸ್ಸು ಅಡ್ಡಿ ಆಗಲಿಲ್ಲ. ಪತಿ-ಪತ್ನಿಯಾಗಿ ಇವರು ಅನೇಕರಿಗೆ ಮಾದರಿಯಾಗಿದ್ದಾರೆ.

IIFA 2022 ಗ್ರೀನ್ ಕಾರ್ಪೆಟ್‌ನಲ್ಲಿ ಕುಶಾ ಕಪಿಲಾ ಅವರೊಂದಿಗೆ ಸಂವಾದದ ಸಮಯದಲ್ಲಿ ಕತ್ರಿನಾ ಜತೆ ಮದುವೆ ಆದ ನಂತರದಲ್ಲಿ ಅನಿಸಿದ್ದೇನು ಎನ್ನುವುದನ್ನು ವಿಕ್ಕಿ ಈಗ ಹೇಳಿಕೊಂಡಿದ್ದಾರೆ. 'ಎಲ್ಲವೂ ಚೆನ್ನಾಗಿ ಸಾಗುತ್ತಿದೆ. ನನಗೆ ಸೆಟಲ್ ಆದೆ ಎನ್ನುವ ಭಾವನೆ ಮೂಡಿದೆ. ವೈಯಕ್ತಿಕ ಜೀವನ ಇರಲಿ, ವೃತ್ತಿ ಜೀವನ ಇರಲಿ, ದೇವರು ನನ್ನ ಮೇಲೆ ದಯೆ ತೋರಿದ್ದಾನೆ' ಎಂದು ವಿಕ್ಕಿ ಕೌಶಲ್ ಸಂತಸ ಹಂಚಿಕೊಂಡಿದ್ದಾರೆ.

'ನನ್ನ ಆಪ್ತರು ಮದುವೆಯಲ್ಲಿ ಹಾಜರಿ ಹಾಕಿದ್ದರು. ಅವರು ಕತ್ರಿನಾ ಅವರನ್ನು ಈ ಮೊದಲೇ ನೋಡಿದ್ದರು. ಹೀಗಾಗಿ ಅವರ ರಿಯಾಕ್ಷನ್ ಕೂಲ್ ಆಗಿಯೇ ಇತ್ತು. ನಾನು ಮತ್ತು ಕತ್ರಿನಾ ಒಟ್ಟಿಗೆ ಕಳೆಯುವ ಸಮಯ ನಿಜಕ್ಕೂ ಖುಷಿ ನೀಡುತ್ತದೆ' ಎಂದು ವಿಕ್ಕಿ ಕೌಶಲ್ ತಿಳಿಸಿದ್ದಾರೆ.

Edited By : Vijay Kumar
PublicNext

PublicNext

23/06/2022 04:54 pm

Cinque Terre

22.8 K

Cinque Terre

0