ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಸೌಟು ಹಿಡಿದು ಬೆಣ್ಣೆದೋಸೆ ತಯಾರಿಸಿದ "ಬಡ್ಡೀಸ್'' ಹೀರೊ ಕಿರಣ್ ರಾಜ್

ದಾವಣಗೆರೆ: "ಬಡ್ಡೀಸ್'' ಸಿನಿಮಾ ಪ್ರಚಾರ ಜೋರಾಗಿ ನಡೆಯುತ್ತಿದೆ. ಚಿತ್ರದ ಪ್ರಮೋಷನ್ ಗಾಗಿ ಬೆಣ್ಣೆನಗರಿಗೆ ಚಿತ್ರತಂಡ ಆಗಮಿಸಿತ್ತು. ಈ ವೇಳೆ ಚಿತ್ರದ ಹೀರೊ ಕಿರಣ್ ರಾಜ್ ದೋಸೆ ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಟೇಸ್ಟಿಯಾಗಿ ಬೆಣ್ಣೆ ದೋಸೆ ತಯಾರಿಸಿ 'ಬಡ್ಡೀಸ್' ನಟ ಸೈ ಎನಿಸಿಕೊಂಡರು. ದಾವಣಗೆರೆಯ ಬೆಣ್ಣೆದೋಸೆಗೆ ಪ್ರಸಿದ್ಧಿ ಪಡೆದಿರುವ ಹೊಟೇಲ್ ಕೊಟ್ಟೂರೇಶ್ವರದಲ್ಲಿ ನಾನು ಸಹ ಬೆಣ್ಣೆದೋಸೆ ಮಾಡುತ್ತೇನೆ ಎಂದು ಕಿರಣ್ ರಾಜ್ ಕೇಳಿಕೊಂಡರು. ಇದಕ್ಕೆ ಹೊಟೇಲ್ ನವರೂ ಸಹ ಒಪ್ಪಿದರು‌. ಇದನ್ನು ನೋಡಿದ ಸಾರ್ವಜನಿಕರೂ ಖುಷಿಪಟ್ಟರು.

ದೋಸೆಯ ರುಚಿ ಸವಿಯಲು ಬಂದಿದ್ದ ಚಿತ್ರ ತಂಡವು ಸೌಟ್ ಹಿಡಿದು ಹಿಟ್ಟು, ಬೆಣ್ಣೆ ಹಾಕಿ 2 ನಿಮಿಷದಲ್ಲಿ ಅದ್ಭುತವಾಗಿ ಬೆಣ್ಣೆ ದೋಸೆ ತಯಾರಿ ಮಾಡಿದ ಕಿರಣ್ ರಾಜ್ ಗೆ ಶಹಬ್ಬಾಸ್ ಗಿರಿ ನೀಡಿತು. ಬಳಿಕ ಬೆಣ್ಣೆ ದೋಸೆ ಸವಿದ ನಟ ಕಿರಣ್ ರಾಜ್ ಹಾಗೂ ಚಿತ್ರ ತಂಡ ರುಚಿಗೆ ಫಿದಾ ಆಯಿತು.

Edited By : Nagesh Gaonkar
PublicNext

PublicNext

17/06/2022 05:13 pm

Cinque Terre

77.6 K

Cinque Terre

0