ಮಂಗಳೂರು: ಎಲ್ಲೇ ಹೋದರೂ ತುಳು ಭಾಷಿಗರು ಕಾಣ ಸಿಗುತ್ತಾರೆ ಎಂಬ ಮಾತೊಂದು ಪ್ರಚಲಿತದಲ್ಲಿದೆ. ಅದೇ ರೀತಿ ಅಬುಧಾಬಿಯ IIFA ಅವಾರ್ಡ್ ಸಮಾರಂಭದಲ್ಲಿ 'ತುಳು ಮಾತು' ಕೇಳಿ ಬಂದಿದೆ. ಬಾಲಿವುಡ್ ಸ್ಟಾರ್ ಗಳಾದ ಸುನಿಲ್ ಶೆಟ್ಟಿ, ಐಶ್ವರ್ಯಾ ರೈ ತುಳುವಿನಲ್ಲೇ ಮಾತನಾಡಿ 'ತುಳು ಅಭಿಮಾನ' ಮೆರೆದಿದ್ದಾರೆ.
ನಿನ್ನೆ ಅಬುಧಾಬಿಯಲ್ಲಿ ನಡೆದ IIFA ಅವಾರ್ಡ್ ಸಮಾರಂಭದಲ್ಲಿ ಸುನಿಲ್ ಶೆಟ್ಟಿ, ಐಶ್ವರ್ಯ ರೈ ಭಾಗಿಯಾಗಿದ್ದರು. ಅವಾರ್ಡ್ ಬಗ್ಗೆ ಮಾತನಾಡುತ್ತಿದ್ದ ಇವರ ಬಳಿ ಮಂಗಳೂರಿನ ಆರ್ ಜೆ ಎರೊಲ್, ತುಳುವಿನಲ್ಲಿ ಮಾತನಾಡುವಂತೆ ಕೇಳಿಕೊಂಡಿದ್ದಾರೆ.
ಸುನಿಲ್ ಶೆಟ್ಟಿ ಮಾತನಾಡುತ್ತಾ, 'ತುಳುಟ್ ದಾದ ಪನ್ಪುನಿ, ಮಸ್ತ್ ಮೋಕೆ ಮಾರಾಯ್ರೆ' ( ತುಳುವಿನಲ್ಲಿ ಏನು ಮಾತಾಡುವುದು. ಬಹಳ ಪ್ರೀತಿ ಮಾರಾಯ್ರೆ ) ಎಂದಿದ್ದಾರೆ. ಐಶ್ವರ್ಯಾ ರೈ ಮಾತನಾಡುತ್ತಾ 'ನಮಸ್ಕಾರ, ಸೌಖ್ಯನ' ( ನಮಸ್ಕಾರ, ಸೌಖ್ಯವೆ?) ಎಂದಿದ್ದಾರೆ.
PublicNext
05/06/2022 09:43 pm