ಕೆಜಿಎಫ್-2 ಬ್ಲಾಕ್ ಬಸ್ಟರ್ ಸಕ್ಸಸ್ ಕಂಡ ಬಳಿಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾದ ನೀರಿಕ್ಷೆಯಲ್ಲಿದ್ದಾರೆ ಸಿನಿರಸಿಕರು ಅಂದುಕೊಂಡಂತೆ ಆಗಿದ್ದರೆ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭಿಸಬೇಕಿತ್ತು. ಆದರೆ ಇನ್ನು ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿಲ್ಲ. ಸದ್ಯ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು ಸಿನಿಮಾ ತಡವಾಗುತ್ತಿರುವುದಕ್ಕೆ ಪ್ರಭಾಸ್ (Prabhas) ಕಾರಣ ಎನ್ನಲಾಗುತ್ತಿದೆ.
ಹೌದು, ಪ್ರಭಾಸ್ ದೇಹದ ತೂಕ ಹೆಚ್ಚಳವಾಗಿದೆ. ಸಲಾರ್ ಸಿನಿಮಾಗೆ ಫಿಟ್ ಆ್ಯಂಡ್ ಫೈನ್ ಆಗಿರೋ ಹೀರೋ ಬೇಕು. ಅಲ್ಲದೆ ಈಗಾಗಲೇ ಚಿತ್ರೀಕರಣ ಆಗಿರುವ ದೃಶ್ಯದಲ್ಲಿ ಪ್ರಭಾಸ್ ತೆಳು ಇದ್ದರು. ಬಳಿಕ ಪ್ರಭಾಸ್ ತೂಕ ತೀರ ಹೆಚ್ಚಾಗಿದೆ. ರಾಧೆ ಶ್ಯಾಮ್ ಸಿನಿಮಾದಲ್ಲಿ ಪ್ರಭಾಸ್ ತುಂಬಾ ದಪ್ಪ ಕಾಣಿಸುತ್ತಿದ್ದರು. ಅಲ್ಲದೇ ಇತ್ತೀಚಿಗೆ ಪ್ರಭಾಸ್ ತೂಕ ಹೆಚ್ಚಾದ ಕಾರಣ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ಇದೀಗ ಸಲಾರ್ ಸಿನಿಮಾಗೂ ಪ್ರಭಾಸ್ ತೂಕ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ ಎನ್ನಲಾಗುತ್ತಿದೆ.
PublicNext
04/06/2022 12:59 pm