ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ದೆಶಕ ಯೋಗರಾಜ್ ಭಟ್ ಅವರ ಮಾವ ಹಾಗೂ ನಟ ಸತ್ಯ ಉಮ್ಮತ್ತಾಲ್ ಹೃದಯಾಘಾತದಿಂದ ಇಂದು ನಿಧನ ಹೊಂದಿದ್ದಾರೆ.
ಸತ್ಯ ಉಮ್ಮತ್ತಾಲ್ ಅವರಿಗೆ 70 ವರ್ಷ ವಯಸ್ಸಾಗಿತ್ತು.ಯೋಗರಾಜ್ ಭಟ್ ಅವರ ಪತ್ನಿ ಅವರ ತಂದೆ ಈ ಸತ್ಯ ಉಮ್ಮತ್ತಾಲ್. ಪವನ್ ಕುಮಾರ್ ನಿರ್ದೇಶನದ ಲೈಫು ಇಷ್ಟೇನೆ ಚಿತ್ರದ ಮೂಲಕ ನಟನೆಯನ್ನ ಆರಂಭಿಸಿದ್ದರು.
ಯೋಗರಾಜ್ ಭಟ್ಟರ ಬಹುತೇಕ ಸಿನಿಮಾಗಳಲ್ಲೂ ಸತ್ಯ ನಟಿಸಿದ್ದಾರೆ. ದುನಿಯಾ ವಿಜಯ್, ಗಣೇಶ್, ಶಿವರಾಜ್ ಕುಮಾರ್ ಹೀಗೆ ಎಲ್ಲರ ಚಿತ್ರಗಳಲ್ಲೂ ಸತ್ಯ ಅಭಿನಯಿಸಿದ್ದಾರೆ.
ಬೆಂಗಳೂರಿನ ಯೋಗರಾಜ್ ಭಟ್ ಅವರ ಮನೆಯಲ್ಲಿಯೇ ಸತ್ಯ ಅವರ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕಿಡಲಾಗಿದೆ. ಇಂದು ಸಂಜೆ ಬೆಂಗಳೂರಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಕೂಡ ನೆರವೇರಲಿದೆ.
PublicNext
03/06/2022 03:49 pm