ಕನ್ನಡ ಚಿತ್ರರಂಗ ಸ್ಟಾರ್ ನಾಯಕಿಯರಲ್ಲಿ ಒಬ್ಬರಾದ ನಟಿ ಮಾಲಾಶ್ರೀ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ. ಈ ಬಾರಿ `ನೈಟ್ ಕರ್ಫ್ಯೂ’ ಕಥೆ ಹೇಳುವ ಮೂಲಕ ನಟನೆಗೆ ಮರಳಿದ್ದಾರೆ.ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ತಮ್ಮದೇ ಆದ ಛಾಪೂ ಮೂಡಿಸಿದ ಮಾಲಾಶ್ರೀ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಕೊರೋನಾ ವೇಳೆಯಲ್ಲಿ ಪತಿ ಕೋಟಿ ರಾಮು ಅಗಲಿದ್ದರು. ಚಿತ್ರರಂಗದಿಂದ ದೂರ ಸರಿದಿದ್ದರು ಈಗ ಬಿಗ್ ಬ್ರೇಕ್ ನ ನಂತ್ರ ಮತ್ತೆ ವಾಪಾಸ್ ಆಗಿದ್ದಾರೆ.
ರವೀಂದ್ರ ವಂಶಿ ನಿರ್ದೇಶನದ `ನೈಟ್ ಕರ್ಫ್ಯೂ’ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಕೊರೋನಾ ವೇಳೆಯಲ್ಲಿ ನಡೆದ ಅಂಶಗಳನ್ನೇ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಇದೊಂದು ಆ್ಯಕ್ಷನ್ ಥ್ರಿಲರ್ ಕತೆಯಾಗಿದ್ದು, ಮೆಡಿಕಲ್ ಮಾಫಿಯಾ ಕಥೆಯಲ್ಲಿ ಮಾಲಾಶ್ರೀ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಜತೆ ಕಿರುತೆರೆ ನಟಿ ರಂಜನಿ ರಾಘವನ್ ಡಾಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
PublicNext
02/06/2022 10:52 pm