ಖ್ಯಾತ ಗಾಯಕಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಶ್ರೇಯಾ ಘೋಷಾಲ್ ಕೆಕೆ ನಿಧನಕ್ಕೆ ಭಾವುಕರಾಗಿದ್ದಾರೆ. ಕೆಕೆ ಜೊತೆ ಅದೆಷ್ಟೋ ವೇದಿಕೆಗಳನ್ನು ಶ್ರೇಯಾ ಹಂಚಿಕೊಂಡಿದ್ದಾರೆ. ಜೊತೆಯಾಗಿ ಯುಗಳಗೀತೆ ಹಾಡಿದ್ದಾರೆ. ವೇದಿಕೆಯ ಮೇಲೆ ಹಾಡುತ್ತಾ ಕುಣಿದಿದ್ದಾರೆ. ಹೀಗಾಗಿ ಕೆಕೆ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಆಘಾತಕ್ಕೆ ಒಳಗಾಗಿದ್ದಾರೆ ಶ್ರೇಯಾ.
ನೆಚ್ಚಿನ ಗಾಯಕನ ಸಾವಿಗೆ ಕಂಬನಿ ಮಿಡಿದಿರುವ ಶ್ರೇಯಾ ಘೋಷಾಲ್, ಭಾವುಕರಾಗಿ ಟ್ವೀಟ್ ಮಾಡಿದ್ದು ‘ಕೆಕೆ ನಿಧನದ ಸುದ್ದಿಯನ್ನು ನನ್ನಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ. ಯಾಕೆ ಕೆಕೆ? ನನ್ನ ಹೃದಯ ಛಿದ್ರವಾಗಿದೆ. ನಿನ್ನ ಸಾವನ್ನು ಸ್ವೀಕರಿಸಲು ಆಗುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಶ್ರೇಯಾ ಘೋಷಾ ಜೊತೆಗೆ ವಿಜಯ ಪ್ರಕಾಶ್, ವಿಶಾಲ್, ಸೇರಿದಂತೆ ಹಲವು ಗಾಯಕರು ಕೆಕೆ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇಂತಹ ಗಾಯಕನ ಸಾವು ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ವ್ಯಕ್ತ ಪಡಿಸಿದ್ದಾರೆ.
PublicNext
01/06/2022 02:47 pm