ದಾವಣಗೆರೆ: ಕನ್ನಡ ಸಿನಿಮಾ ರಂಗದಲ್ಲಿ ವಿಭಿನ್ನ ಕಥಾ ಹಂದರವುಳ್ಳ " ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರ ಮೇ. 20ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
" ಶರಣಪ್ಪ ಎಂ ಕೊಟಗಿ " ಯವರ ಚೊಚ್ಚಲ ನಿರ್ಮಾಣದ ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದ ಇನ್ಸಾಂಟ್ ಸಿನಿ ಕ್ರಿಯೇಷನ್ಸ್ ಅರ್ಪಿಸುವ ಚಿತ್ರ ಇದಾಗಿದೆ.
"ದಾರಿ ಯಾವುದಯ್ಯ ವೈಕುಂಠಕ್ಕೆ ” ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಕನ್ನಡ ಸ್ಪರ್ಧಾತ್ಮಕ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಚಿತ್ರ ” ಪ್ರಶಸ್ತಿಯನ್ನು ತನ್ನ ಮಡಿಗೇರಿಸಿಕೊಂಡಿದೆ.
ಮಲೇಷ್ಯಾ, ಜರ್ಮನಿ, ಬಾಂಗ್ಲಾದೇಶ, ಲಂಡನ್, ಸ್ಪೇನ್, ಅಮೇರಿಕಾ, ಇಟಲಿ, ಕೇರಳ, ಬಿಹಾರ, ರಾಜಸ್ಥಾನ, ಕಾಶಿ , ಸಿಂಗಾಮರ್, ಔರಂಗಾಬಾದ್, ಕೊಲ್ಕತ್ತಾ, ಮಹಾರಾಷ್ಟ್ರ, ಅಂತರಾಷ್ಟ್ರೀಯ ದೆಹಲಿ, ಹೈದರಾಬಾದ್ ಸೇರಿದಂತೆ ಇನ್ನೂ ಮುಂತಾದ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ಸುಮಾರು 150 ಕ್ಕೂ ಹೆಚ್ಚು ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದು ಸಂತಸ ತಂದಿದೆ ಎಂದು ಚಿತ್ರದ ನಿರ್ಮಾಪಕರಾದ ಶರಣಪ್ಪ ಎಂ ಕೊಟಗಿ ತಿಳಿಸಿದರು.
ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಹಂಚಿಕೊಂಡ ಅವರು, ಈ ಚಿತ್ರದಲ್ಲಿ ರಾಜ್ಯ ಪ್ರಶಸ್ತಿ ವಿಜೇತೆ “ ತಿಥಿ ಸಿನಿಮಾದಲ್ಲಿ ನಟಿಸಿದ್ದ ಪೂಜಾ ಅಭಿನಯಿಸಿದ್ದಾರೆ, ಜೊತೆಗೆ ವರ್ಧನ್ ತೀರ್ಥಹಳ್ಳಿ ನಾಯಕನಟನಾಗಿ ಅಭಿನಯಿಸಿದ್ದಾರೆ.
ಬಲ ರಾಜ್ಯಾಡಿ ( ಮೈಸೂರು ಬಾಲಣ್ಣ ) , ಅನುಷಾ , ಶೀಬಾ , ಇನ್ನೂ ಮುಂತಾದವರ ತಾರಾಗಣವಿದೆ. ಸಿದ್ದು ಪೂರ್ಣಚಂದ್ರ ಅವರು ಕಥೆ , ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮ್ಯೂಸಿಕ್ ಬಾಕ್ಸ್ ” ಹಾಗೂ ಇಸ್ಟ್ಯಾಂಟ್ ಸಿನಿ ಕ್ರಿಯೇಶನ್ ಈ ಚಿತ್ರ ಬಿಡುಗಡೆ ಮಾಡಲಿದೆ. 40 ರಿಂದ 60 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.
PublicNext
16/05/2022 06:31 pm