ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಟ್ರಿಪಲ್ 7 ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಮನುಷ್ಯ ಮತ್ತು ಶ್ವಾನದ ನಡುವಿನ ಆ ಗಾಢವಾದ ಸಂಬಂಧದ ಒಂದು ಚಿತ್ರಣವೇ ಈ ಸಿನಿಮಾ ಅನ್ನೋ ಅಭಿಪ್ರಾಯವೂ ಮೂಡುತ್ತದೆ. ಬನ್ನಿ, ನೋಡೋಣ.
ರಕ್ಷಿತ್ ಶೆಟ್ಟಿ ಅಭಿನಯದ ಎಲ್ಲ ಚಿತ್ರಗಳಂತೆ ಈ ಚಾರ್ಲಿ ಚಿತ್ರವೂ ಕೂಡ ಒಂದು ವಿಶೇಷ ಚಿತ್ರವೇ ಆಗಿದೆ. ವಿಶೇಷವಾಗಿ ಈ ಚಿತ್ರದಲ್ಲಿ ನಾಯಿ ಇರೋದ್ರಿಂದ ಒಂದು ಹಂತಕ್ಕೆ ಹೊಸ ನಿರೀಕ್ಷೆನೂ ಹುಟ್ಟಿಕೊಂಡಿದೆ.
ಜೂನ್-10 ರಂದು ರಿಲೀಸ್ ಆಗೋ ಈ ಚಿತ್ರದಲ್ಲಿ ಏನೋ ವಿಶೇಷ ಕಥೆ ಇದೆ ಅಂತಲೇ ಅನಿಸುತ್ತದೆ. ಕಿರಣ್ ರಾಜ್.ಕೆ ನಿರ್ದೇಶನದ ಈ ಚಿತ್ರದಲ್ಲಿ ವಿಶೇಷ ಸೆಳೆತ ಅಂತೂ ಇದ್ದೇ ಇದೆ. ವೇಟ್ ಮಾಡಿ.
-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್
PublicNext
16/05/2022 01:12 pm