ಮುಂಬೈ: ಹಿಂದಿ ಟಿವಿ ಜನಪ್ರಿಯ ಕಾರ್ಯಕ್ರಮ 'ಕಾಫಿ ವಿತ್ ಕರಣ್' ಇನ್ನು ಮುಂದೆ ಪ್ರಸಾರವಾಗುವುದಿಲ್ಲ ಎಂದು ಶೋ ನಡೆಸಿಕೊಡುತ್ತಿದ್ದ ಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಹೇಳಿದ್ದಾರೆ.
ಈ ಬಗ್ಗೆ ಬುಧವಾರ ಟ್ವಿಟರ್ ಮಾಡಿರುವ ಕರಣ್ ಜೋಹರ್, ಕಾಫಿ ವಿತ್ ಕರಣ್ ಕಾರ್ಯಕ್ರಮ ನನ್ನ ಮತ್ತು ನಿಮ್ಮ ಜೀವನದ ಭಾಗವೇ ಆಗಿತ್ತು. ಈ ಕಾರ್ಯಕ್ರಮ ಇನ್ನು ಮರಳಿ ಬರುವುದಿಲ್ಲ ಎನ್ನುವುದನ್ನು ಭಾರವಾದ ಹೃದಯದೊಂದಿಗೆ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
2004ರಲ್ಲಿ ಸ್ಟಾರ್ ವರ್ಲ್ಡ್ ಟಿವಿ ಚಾನಲ್‌ನಲ್ಲಿ ‘ಕಾಫಿ ವಿತ್ ಕರಣ್‘ ಮೊದಲ ಶೋ ಪ್ರಸಾರವಾಗಿತ್ತು. ಅಂದು ಶಾರುಖ್ ಖಾನ್ ಮತ್ತು ಕಾಜಲ್ ಮೊದಲ ಎಪಿಸೋಡ್‌ನಲ್ಲಿ ಕರಣ್ ಜತೆ ಭಾಗವಹಿಸಿದ್ದರು. ಅಲ್ಲಿಂದೀಚೆಗೆ 2019ರವರೆಗೆ ಆರು ಸೀಸನ್‌ಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಿದೆ.
PublicNext
04/05/2022 04:32 pm