ಮುಂಬೈ : ಕಳೆದೆರಡು ವರ್ಷಗಳಿಂದ ಈದ್ ಪ್ರಯುಕ್ತ ಕಿಂಗ್ ಖಾನ್ ಕಾಣಲು ಬರುವ ಅಭಿಮಾನಿಗಳಿಗೆ ಕೊರೊನಾ ಬ್ರೇಕ್ ಹಾಕಿತ್ತು. ಆದರೆ ಈ ಭಾರಿ ಕೊರೊನಾ ಕಾಟವಿರದ ಕಾರಣ ಇಂದು ಶಾರುಖ್ ಖಾನ್ ಅವರ ದರ್ಶನಕ್ಕಾಗಿ ಅವರ ಅಭಿಮಾನಿಗಳು ಮುಂಬೈನ ಬಾಂದ್ರಾದಲ್ಲಿರುವ ಅವರ ಮನೆಗೆ ಆಗಮಿಸಿದ್ದರು.
ಈ ವೇಳೆ ಶಾರುಖ್ ತಮ್ಮ ಬಾಲ್ಕನಿಯಲ್ಲಿ ನಿಂತು ತಮ್ಮನ್ನು ಕಾಣಲು ಬಂದ ಅಭಿಮಾನಿಗಳಿಗೆ ಕೈ ಬೀಸಿದ್ದಾರೆ. ಇನ್ನು ಅಭಿಮಾನಿಗಳು ನಾವು ಶಾರುಖ್ ಅವರನ್ನು ತುಂಬಾ ಪ್ರೀತಿಸುತ್ತೇವೆ ಎಂದು ಘೋಷಣೆ ಕೂಗಿ ನೆಚ್ಚಿನ ನಟನನ್ನು ಕಂಡು. ಪುಳಕಿತರಾಗಿದ್ದಾರೆ. ಇನ್ನು ಅಭಿಮಾನಿಗಳ ನೂಕುನುಗ್ಗಲು ಹೆಚ್ಚಿದ್ದರಿಂದ ಕೆಲ ಕಾಲ ರಸ್ತೆ ಸಂಚಾರಕ್ಕೂ ಅಡ್ಡಿ ಉಂಟಾಗಿತ್ತು.
PublicNext
03/05/2022 08:32 pm