ನವದೆಹಲಿ: ಹಿಂದಿ ರಾಷ್ಟ್ರ ಭಾಷೆಯಲ್ಲ, ದೇಶದಲ್ಲಿ ಅತಿ ಹೆಚ್ಚು ಮಾತನಾಡುತ್ತಾರೆ ಅಷ್ಟೇ ಎಂದು ಗಾಯಕ ಸೋನ್ ನಿಗಮ್, ಪರೋಕ್ಷವಾಗಿ ಅಜಯ್ ದೇವಗನ್ಗೆ ಬುದ್ಧಿವಾದ ಹೇಳಿದ್ದಾರೆ.
ಸಂವಾದ ಕಾರ್ಯಕ್ರಮವೊಂದರಲ್ಲಿ ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೋನು ನಿಗಮ್, 'ಹಿಂದಿ ರಾಷ್ಟ್ರ ಭಾಷೆ ಎಂದು ಸಂವಿಧಾನದಲ್ಲಿಯೇ ಉಲ್ಲೇಖಿಸಲಾಗಿಲ್ಲ. ಅದನ್ನು ಬೇರೆಯವರು ಮಾತನಾಡಬೇಕು ಎಂಬ ಒತ್ತಾಯವೂ ಮಾಡುವಂತಿಲ್ಲ. ಹಿಂದಿ ದೇಶದಲ್ಲಿ ಹೆಚ್ಚು ಮಾತನಾಡುವ ಭಾಷೆಯಾಗಿದೆ ಅಷ್ಟೇ' ಎಂದು ಹೇಳಿದ್ದಾರೆ.
ತಮಿಳು ಮತ್ತು ಸಂಸ್ಕೃತ ಪ್ರಪಂಚದ ಹಳೆಯ ಭಾಷೆಯಾಗಿವೆ. ಇದರಲ್ಲಿ ತಮಿಳು ಸಂಸ್ಕೃತಕ್ಕಿಂತಲೂ ಹಳೆಯದ್ದು ಎಂಬ ವಾದವಿದೆ. ಹೀಗಾಗಿ ಭಾಷೆಯ ವಿಷಯಕ್ಕೆ ಕಿತ್ತಾಡುವುದು ಸಲ್ಲದು. ಇಂಗ್ಲಿಷ್ ಅನ್ನು ವ್ಯಾವಹಾರಿಕ ಭಾಷೆಯಾಗಿ ಮಾತನಾಡುತ್ತೇವೆ. ಕೋರ್ಟ್ನ ತೀರ್ಪುಗಳನ್ನು ಕೂಡ ಇಂಗ್ಲಿಷ್ನಲ್ಲಿಯೇ ನೀಡಲಾಗುತ್ತದೆ. ವಿಮಾನದಲ್ಲಿ ಗಗನಸಖಿಯರು ಇಂಗ್ಲಿಷ್ನಲ್ಲೇ ಮಾತನಾಡುತ್ತಾರೆ. ಆಯಾ ಭಾಷಿಕರಿಗೆ ತಮ್ಮ ಮಾತೃಭಾಷೆಗಳಲ್ಲಿ ಮಾತನಾಡುವ ಹಕ್ಕಿದೆ ಎಂದರು.
ಹಿಂದಿಯನ್ನು ಮಾತನಾಡುವಂತೆ ಎಲ್ಲ ಮೇಲೆ ಹೇರಲು ಸಾಧ್ಯವಿಲ್ಲ. ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶದಲ್ಲಿ ಭಾಷಾ ವಿವಾದವು ಅನಗತ್ಯ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ. ಇದನ್ನೆಲ್ಲಾ ಬೆಳೆಸಬೇಡಿ ಎಂದು ಪರೋಕ್ಷವಾಗಿ ಅಜಯ್ ದೇವಗನ್ಗೆ ಬುದ್ಧಿವಾದ ಹೇಳಿದ್ದಾರೆ.
PublicNext
03/05/2022 08:08 pm