ಬೆಂಗಳೂರು: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕನ್ನಡ ಇಂಡಸ್ಟ್ರೀಗೆ ಬಂದು ಎಷ್ಟು ವರ್ಷಗಳು ಆಗಿವೆ ಗೊತ್ತೇ.? ಹೌದು. ಈ ಬೆಡಗಿ ಕನ್ನಡಿಗರ ಹೃದಯ ಕದ್ದು ಹೆಚ್ಚು ಕಡಿಮೆ ಎರಡು ದಶಕಗಳೇ ಆಗ್ತಾ ಬಂತು. ಅಂದ್ರೆ, ಅಂತಿರೋ. ಬನ್ನಿ, ಹೇಳ್ತಿವಿ.
ರಮ್ಯಾ ಅಭಿನಯದ ಅಭಿ ಚಿತ್ರ ತೆರೆ ಕಂಡು ಮೊನ್ನೆ ಏಪ್ರಿಲ್ 25ಕ್ಕೆ 19 ವರ್ಷಗಳೇ ಆಗಿ ಬಿಟ್ಟಿದೆ. ಅದನ್ನ ರಮ್ಯಾ ಹೇಗೆಲ್ಲ ಸೆಲೆಬ್ರೆಟ್ ಮಾಡಿದರೋ ಏನೋ ಗೊತ್ತಿಲ್ಲ. ಆದರೆ, ಈ ಒಂದು ಸುದ್ದಿ ವೆಬ್ ಸೈಟ್ ಗಳಲ್ಲಿ ರಾರಾಜಿಸುತ್ತಲೇ ಇದೆ. ಇದರ ಬೆನ್ನಲ್ಲಿಯೇ ರಮ್ಯಾ ಕಮ್ ಬ್ಯಾಕ್ ಸುದ್ದಿನೂ ಮರು ಜೀವ ಪಡೆದಿದೆ.
ರಮ್ಯಾ ಚಿತ್ರರಂಗಕ್ಕೆ ಯಾವಾಗ ಬರ್ತಾರೋ ಏನೋ. ಆ ವಿಷಯ ಇನ್ನೂ ಖಚಿತಗೊಂಡಿಲ್ಲ.ಆದರೆ, ರಮ್ಯಾ ಕಮ್ ಬ್ಯಾಕ್ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಇದೆ. ಸಿನಿ ಪ್ರೇಮಿಗಳಲ್ಲಿ ಬೇಜಾನ್ ಕ್ಯೂರಿಯೋಸಿಟಿಯನ್ನೂ ಇದು ಹುಟ್ಟುಹಾಕುತ್ತಲೇ ಇದ್ದು ರಮ್ಯಾ ಕಥೆಗಳನ್ನ ಕೇಳ್ತಾನೇ ಇದ್ದಾರೆ ಅನ್ನೋ ವಿಷಯವೂ ಅಷ್ಟೇ ವೈರಲ್ ಆಗುತ್ತಲೇ ಇದೆ. ಯಾವುದಕ್ಕೂ ವೇಟ್ ಮಾಡಿ. ಪದ್ಮಾವತಿ ಬಂದ್ರು ಆಶ್ಚರ್ಯ ಇಲ್ಲ.
PublicNext
27/04/2022 05:10 pm