ಹಿಮಾಚಲ್ ಪ್ರದೇಶ: ಬಾಲಿವುಡ್ ನಾಯಕ ನಟ ರಣಬೀರ್ ಕಪೂರ್ ಹಾಗೂ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಚಿತ್ರದ ಮೇಕಿಂಗ್ ವೀಡಿಯೋ ಒಂದು ಈಗ ವೈರಲ್ ಆಗಿದೆ.
ಬಿಳಿ ಪೈಜಾಮದಲ್ಲಿ ನಟ ರಣಬೀರ್ ಕಾಣಿಸಿಕೊಂಡಿದ್ದಾರೆ. ಸಾರಿಯಲ್ಲಿಯೇ ನಟಿ ರಶ್ಮಿಕಾ ಮಂದಣ್ಣ ಇಲ್ಲಿ ಅಭಿನಯಿಸುತ್ತಿದ್ದಾರೆ.
ಆದರೆ, ಈ ಮೇಕಿಂಗ್ ವೀಡಿಯೋ ಸಿನಿಮಾ ತಂಡ ಹಂಚಿಕೊಂಡ ವೀಡಿಯೋ ಅಲ್ಲವೇ ಅಲ್ಲ. ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಣದ ಸಮಯದಲ್ಲಿ ಕಾರ್ ನಲ್ಲಿ ಹೊರ ಸಿನಿಪ್ರೇಮಿಗಳು ಚಿತ್ರೀಕರಿಸಿದ ವೀಡಿಯೋ ಇದಾಗಿದೆ. ವೀಡಿಯೊದಲ್ಲಿ ಅಂತಹ ವಿಶೇಷ ದೃಶ್ಯ ಏನೂ ಇಲ್ಲ. ಆದರೂ ಈ ಒಂದೇ ಒಂದು ವೀಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ.
PublicNext
23/04/2022 08:12 pm