ಚಾಮರಾಜನಗರ : ಕರ್ನಾಟಕ ರತ್ನ ದಿ. ಡಾ.ಪುನೀತ್ ರಾಜ್ ಕುಮಾರ ಇಹಲೋಕ ತೆಜೀಸಿದರು ಅವರ ನೆನಪು ಅಮರವಾಗಿದೆ. ಸದ್ಯ ಏ.24ರಂದು ಕನ್ನಡದ ಮೇರುನಟ ಡಾ.ರಾಜ್ ಕುಮಾರ್ ಅವರ ಜನ್ಮದಿನ. ಈ ಹಿನ್ನೆಲೆ ಕರ್ಮ ಭೂಮಿಯಿಂದ ಪುಣ್ಯಭೂಮಿವರೆಗೆ ಡಾ.ರಾಜ್ ಹಾಗೂ ಡಾ.ಪುನೀತ್ ರಾಜ್ ಕುಮಾರ್ ಅವರ ಅಮರ ಜ್ಯೋತಿ ಯಾತ್ರೆ ಆರಂಭಗೊಂಡಿದೆ.
ಡಾ.ರಾಜ್ಕುಮಾರ್ ಅವರ ಹುಟ್ಟೂರು ದೊಡ್ಡಗಾಜನೂರಿನಲ್ಲಿ ಅಮರ ಜ್ಯೋತಿ ಯಾತ್ರೆಗೆ ಡಾ.ರಾಜ್ ಸಹೋದರಿ ನಾಗಮ್ಮ ಚಾಲನೆ ನೀಡಿದರು. ದೊಡ್ಮನೆ ಕುಟುಂಬದ ಅಭಿಮಾನಿಗಳ ಬಳಗವು ಹಮ್ಮಿಕೊಂಡಿರುವ ಈ ಯಾತ್ರೆಯು ಗಾಜನೂರಿನಿಂದ ಹೊರಟು ಏ.24ರಂದು ಬೆಂಗಳೂರಿನಲ್ಲಿರುವ ಡಾ.ರಾಜ್ ಮತ್ತು ಅಪ್ಪು ಸಮಾಧಿ ತಲುಪಲಿದೆ.
PublicNext
21/04/2022 04:38 pm