ಬೆಂಗಳೂರು: ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ಅಭಿನಯದ ಮೊದಲ ಚಿತ್ರದ ಇಂಟ್ರೂಡಕ್ಷನ್ ಟೀಸರ್ ಮೇಕಿಂಗ್ ವೀಡಿಯೋ ಈಗ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.
ಮೊದಲ ಚಿತ್ರ ಆಗಿರೋದ್ರಿಂದ ಸಹಜವಾಗಿಯೇ ಕಿರೀಟಿ ಜೋಶ್ ಅಲ್ಲಿಯೇ ಇದ್ದಾರೆ. ಹೌದು. ಈಗಾಗಲೇ ರಿಲೀಸ್ ಆಗಿರೋ ಕಿರೀಟಿ ಮೇಕಿಂಗ್ ಇಂಟ್ರೂಡಕ್ಷನ್ ಸೂಪರ್ ಅಂತಲೇ ಅನೇಕರು ಹೇಳಿದ್ದಾರೆ. ರಾಜಮೌಳಿಯಂತಹ ನಿರ್ದೇಶಕರು ಕಿರೀಟಿಯ ಡೆಡಿಕೇಷನ್ ಮೆಚ್ಚಿಕೊಂಡು ಕೊಂಡಾಡಿದ್ದಾರೆ.
ಆದರೆ, ಈ ಇಂಟ್ರೂಡಕ್ಷನ್ ಗಾಗಿಯೇ ಕಿರೀಟಿ ಸಾಕಷ್ಟು ಕಷ್ಟಪಟ್ಟಿದ್ದಾರೆ.ಅದರ ಮೇಕಿಂಗ್ ಝಲಕ್ ಇಲ್ಲಿದೆ. PublicNext-ಗೆ ಲಭ್ಯವಾದ ಈ ವೀಡಿಯೋದಲ್ಲಿ ಕಿರೀಟಿಯ ಸಾಹಸ ದೃಶ್ಯದ ಮೇಕಿಂಗ್ ಝಲಕ್ ನಿಮಗೆ ದೊರೆಯುತ್ತದೆ.
ವರಾಹಿ ಫಿಲ್ಮಂ ಪ್ರೊಡಕ್ಷನ್ ಅಡಿಯಲ್ಲಿಯೇ ಈ ಚಿತ್ರ ರೆಡಿ ಆಗುತ್ತಿದೆ.ಬಾಹುಬಲಿ ಚಿತ್ರ ಖ್ಯಾತಿಯ ಕ್ಯಾಮೆರಾಮನ್ ಕೆ.ಕೆ.ಸೆಂಥಿಲ್ ಕುಮಾರ್ ಕ್ಯಾಮೆರಾ ಕಲ್ಪನೆಯ ಸ್ಪರ್ಶ ಇಲ್ಲೂ ಇದೆ.ದೇವಿ ಶ್ರೀ ಪ್ರಸಾದ್ ಸಂಗೀತ ಕೊಡ್ತಿದ್ದಾರೆ. ಕಿರೀಟಿ ತಂದೆ ಪಾತ್ರದಲ್ಲಿ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ. ಶ್ರೀಲೀಲಾ ಈ ಚಿತ್ರದಲ್ಲಿ ಕಿರೀಟಿಗೆ ನಾಯಕಿಯಾಗಿಯೇ ಕಾಣಿಸಿಕೊಳ್ತಿದ್ದಾರೆ.
-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್
PublicNext
21/04/2022 11:37 am