ಮುಂಬೈ: ಸದಾ ಕಾಲ ಫಿಟ್ನೆಸ್ ಬಗ್ಗೆ ಮಾತನಾಡುವ, ಶಿಸ್ತಿನ ಜೀವನ ನಡೆಸುವ, ಇತರರಿಗೂ ಮಾದರಿ ಆಗಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ವಿಮಲ್ ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಿರುವುದು ಸರಿಯಲ್ಲ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ. ಅದರ ಬೆನ್ನಲ್ಲೇ ಅಕ್ಷಯ್ ಕುಮಾರ್ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಮಲ್ ಜಾಹೀರಾತಿನಲ್ಲಿ ಇನ್ಮುಂದೆ ನಟಿಸುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, "ನನ್ನನ್ನು ಕ್ಷಮಿಸಿ. ಎಲ್ಲಾ ಆಪ್ತರಿಗೂ, ಅಭಿಮಾನಿಗಳಿಗೂ ನಾನು ಕ್ಷಮೆ ಕೇಳಲು ಬಯಸುತ್ತೇನೆ. ಕಳೆದ ಕೆಲ ದಿನಗಳಿಂದ ನೀವು ನೀಡಿದ ಪ್ರತಿಕ್ರಿಯೆ ನನ್ನ ಮೇಲೆ ಆಳ ಪ್ರಭಾವ ಬೀರಿದೆ. ಇನ್ನು ಮುಂದೇ ಯಾವುದೇ ತಂಬಾಕು ಜಾಹೀರಾತಿನಲ್ಲಿ ನಟಿಸೋದಿಲ್ಲ. ವಿಮಲ್ ಎಲೈಚಿ ಸಂಸ್ಥೆಯೊಂದಿಗಿನ ನನ್ನ ಒಡನಾಟ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ. ಆದ್ದರಿಂದ ಈ ಜಾಹೀರಾತಿನಿಂದ ಹಿಂದೆ ಸರಿಯುತ್ತಿದ್ದೇನೆ. ಇದರಿಂದ ಗಳಿಸಿದ ಹಣವನ್ನು ಉತ್ತಮ ಕೆಲಸಕ್ಕೆ ಬಳಸಲು ನಿರ್ಧರಸಿದ್ದೇನೆ. ಈಗಾಗಲೇ ಬಾಂಡ್ ಆಗಿರೋ ಕಾರಣ ಕಾನೂನಿನ ನಿಯಮಗಳ ಅನ್ವಯ ಜಾಹೀರಾತು ಪ್ರಸಾರ ಆಗಲಿದೆ. ಮುಂದಿನ ಜಾಹೀರಾತು ಆಯ್ಕೆಗಳನ್ನು ಮಾಡೋ ಸಂದರ್ಭದಲ್ಲಿ ಉತ್ತಮವಾಗಿ ಗಮನ ಹರಿಸುತ್ತೇನೆ ಎಂದು ಭರವಸೆ ನೀಡುತ್ತೇನೆ. ಪ್ರತಿಯಾಗಿ ನಾನು ನಿಮ್ಮ ಪ್ರೀತಿ ಮತ್ತು ಶುಭಾಶಯಗಳನ್ನು ನೀಡಿ" ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಶಾರುಖ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ವಿಮಲ್ ಜಾಹೀರಾತಿನಲ್ಲಿ ನಟಿಸಿದ್ದರು. ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳ ಪ್ರಚಾರ ಜಾಹೀರಾತಿಗಳಲ್ಲಿ ನಟಿಸಿದಕ್ಕೆ ಅಕ್ಷಯ್ ಕುಮಾರ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.
PublicNext
21/04/2022 09:16 am