ಬೆಂಗಳೂರು: ಕನ್ನಡದ ಕೆಜಿಎಫ್-2 ಚಿತ್ರ ಭರ್ಜರಿಯಾಗಿಯೇ ಓಡ್ತಿದೆ. ಆದರೆ, ಪರ ರಾಜ್ಯದ ನಟರು ಈ ಚಿತ್ರವನ್ನ ಕೊಂಡಾಡಿದ್ದಾರೆ. ಆದರೆ, ಕನ್ನಡದ ನಟರೇ ಏಕೋ ಮೌನ ತಾಳಿದ್ದಾರೆ. ಇದಕ್ಕೆ ಕಾರಣ ಏನೂ ಗೊತ್ತಿಲ್ಲ. ಈ ನಡುವೇನೆ ಕಿಚ್ಚ ಸುದೀಪ್ ಮಾತನಾಡಿರೋ ಆ ಒಂದು ವೀಡಿಯೋ ಈಗ ಬೆಂಕಿ ಹಚ್ಚೋ ಕೆಲಸ ಮಾಡ್ತಿದೆ.
ಹೌದು ! ಸುದೀಪ್ ಗೋವಾ ಫಿಲ್ಮಂ ಫೆಸ್ಟಿವಲ್ ಗೆ ಅತಿಥಿ ಆಗಿಯೇ ಹೋಗಿದ್ದರು. ಆಗ ಅಲ್ಲಿಯ ಪತ್ರಕರ್ತರು, "ಕೆಜಿಎಫ್ ಚಿತ್ರದಲ್ಲಿರೋ ನಿಮ್ಮ ರೋಲ್ ಬಗ್ಗೆ ಹೇಳಿ" ಅಂತಲೇ ಕೇಳಿದ್ದಾರೆ. ಆಗಲೇ ಸುದೀಪ್ ನಾನು ಈ ಚಿತ್ರದಲ್ಲಿ ನಟಿಸಿಯೇ ಇಲ್ಲ ಅಂತ ಹೇಳಿ ಬಿಟ್ಟಿದ್ದಾರೆ. ಅಷ್ಟೇ ನೋಡ್ರಿ, ಮೂರು ವರ್ಷದ ಹಿಂದಿನ ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಏನೇನೋ ಟರ್ನ್ ತೆಗೆದುಕೊಂಡು ಸಿಕ್ಕಾಪಟ್ಟೆ ವೈರಲ್ ಆಗಿ ಬಿಟ್ಟಿದೆ.
ಅಂದ್ಹಾಗೆ ಸುದೀಪ್ ಮತ್ತು ಯಶ್ ನಡುವೇ ಯಾವುದೇ ರೀತಿಯ ಮನಸ್ಥಾಪಗಳೇ ಇಲ್ಲ. ಇವರ ಫ್ಯಾನ್ಸ್ ವಿಷಯದಲ್ಲೂ ಅಷ್ಟೇ ಕಣ್ರೀ. ಯಾರೂ ಕಿತ್ತಾಡಿಕೊಂಡಿಲ್ಲ. ಆದರೆ, ಈಗ ಈ ವೀಡಿಯೋ ಹರಿಬಿಟ್ಟು ಏನೇನೋ ಕಿತಾಪತಿಯನ್ನ ಅದ್ಯಾರ್ ಮಾಡ್ತಿದ್ದರೋ ಏನೋ.ವೀಡಿಯೋ ವೈರಲ್ ಆಗಿ ಬಿಟ್ಟಿದೆ. ಹಾಗಂತ ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡಿಲ್ವೇ ಅಂತ ಕೇಳ್ಬೇಡಿ. ಸುದೀಪ್ ಚಿತ್ರಕ್ಕೆ ವಿಶ್ ಮಾಡಿದ್ದಾರೆ. ಇಡೀ ತಂಡಕ್ಕೂ ಗುಡ್ ಲಕ್ ಹೇಳಿದ್ದಾರೆ. ಆದರೂ ಈ ವೀಡಿಯೋ ಒಂದಷ್ಟು ಕಿರಿಕಿರಿ ಮಾಡ್ತಿರೋದಂತೂ ಅಷ್ಟೇ ಸತ್ಯ.
-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್
PublicNext
20/04/2022 08:20 pm