ಪ್ರೀಮಿಯರ್ ಲೀಗ್ ಕ್ಲಬ್ ಮ್ಯಾಂಚೆಸ್ಟರ್ ಸಿಟಿ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಸಿನಿಮಾ 'ಕೆಜಿಎಫ್: ಚಾಪ್ಟರ್ 2'ಗೆ ಗೌರವ ಸಲ್ಲಿಸಿ ಪೋಸ್ಟ್ ಮಾಡಿದೆ.
ತಂಡವು ತಮ್ಮ ಆಟಗಾರರಾದ ಕೆವಿನ್ ಡಿ ಬ್ರೂಯ್ನೆ, ಇಲ್ಕೇ ಗುಂಡೋಗನ್ ಮತ್ತು ಫಿಲ್ ಫೋಡೆನ್ ಅವರ ಚಿತ್ರವನ್ನು ಹಂಚಿಕೊಂಡಿದೆ. ಜೊತೆಗೆ "ನಮ್ಮದೇ ಆದ ಕೆಜಿಎಫ್!" ಎಂದು ಬರೆದುಕೊಂಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚಿತ್ರದ ಹಿಂದಿ ಆವೃತ್ತಿಯನ್ನು ಡಬ್ಬಿಂಗ್ ಮಾಡಿದ ನಟ-ನಿರ್ಮಾಪಕ ಫರ್ಹಾನ್ ಅಖ್ತರ್, "ಬ್ರಿಲಿಯಂಟ್" ಎಂದು ಹೇಳಿದ್ದಾರೆ.
PublicNext
20/04/2022 04:48 pm