ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಜಿಎಫ್-2 ಚಿತ್ರ ನೋಡಿದ್ರೆ ಹಣ ಮತ್ತು ಸಮಯ ವ್ಯರ್ಥ: ನಟ ಕೆಆರ್‌ಕೆ

ಮುಂಬೈ:ಯಶ್ ಅಭಿನಯದ ಕೆಜಿಎಫ್-2 ಚಿತ್ರ ಸತತ ಎರಡು ವರ್ಷ ಚಿತ್ರೀಕರಣಗೊಂಡು ಸದ್ಯ ನಿನ್ನೆಯಷ್ಟೇ ಬೆಳ್ಳಿತೆರೆಗೆ ಅಪ್ಪಳಿಸಿದೆ. ಒಟ್ಟಾರೆ ಚಿತ್ರ ಅಭಿಮಾನಿಗಳು ಸೈ ಎಂದಿದ್ದಾರೆ. ಪ್ರಶಾಂತ್ ನೀಲ್ ವರ ನಿರ್ದೇಶನಕ್ಕೂ ಪ್ರೇಕ್ಷಕ ಫಿದಾ ಆಗಿದ್ದಾನೆ. ಆದ್ರೆ ಬಾಲಿವುಡ್ ನಟ ಕಮಲ್ ಆರ್ ಖಾನ್ ಕೆಜಿಎಫ್-2 ಚಿತ್ರದ ಬಗ್ಗೆ ಕ್ಯಾತೆ ತೆಗೆದಿದ್ದಾರೆ.

'ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಚಿತ್ರ ನೋಡಿದ್ರೆ ಹಣ ಮತ್ತು ಮೂರು ತಾಸು ಸಮಯ ವ್ಯರ್ಥ. ಸಿನಿಮಾ ನೋಡಿದ್ರೆ ಮೂರು ತಾಸು ಮೂರು ತಾಸು ಅತ್ಯಂತ ಚಿತ್ರಹಿಂಸೆ‌ ಎನಿಸುತ್ತದೆ' ಎಂದು ಕೆಆರ್‌ಕೆ ಅಭಿಪ್ರಾಯಪಟ್ಟಿದ್ದಾರೆ.

'ಒಂದು ವೇಳೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡರೆ ಬಾಲಿವುಡ್ ಕತೆ ಮುಗಿದಂತೆ. ಯಾಕಂದ್ರೆ ಬಾಲಿವುಡ್‌ನಲ್ಲಿ ಇಂತಹ ಸಿನಿಮಾ ಮಾಡೋದು ತುಂಬ ಅಪಾಯಕಾರಿ' ಎಂದು ಬಣ್ಣಿಸಿರುವ ಅವರು ಹ್ಯಾಷ್ ಟ್ಯಾಗ್ ಮೂಲಕ "ಆ ಥೂ" ಎಂದು ಬರೆದು ರೇಟಿಂಗ್ ಕೊಟ್ಟಿದ್ದಾರೆ.

Edited By : Nagaraj Tulugeri
PublicNext

PublicNext

15/04/2022 12:50 pm

Cinque Terre

37.24 K

Cinque Terre

42