ಮುಂಬೈ:ಕನ್ನಡದ ಕೆಜಿಎಫ್-2 ತಮಿಳಿನ ಬೀಸ್ಟ್ ಚಿತ್ರದ ಅಬ್ಬರ ಜೋರ್ ಆಗಿಯೇ ಇದೆ. ಇವುಗಳ ಆಗಮನಕ್ಕೆ ಬಾಲಿವುಡ್ ನ ಚಿತ್ರವೊಂದು ಸೈಡ್‌ಗೆ ಸರಿದು ಬಿಟ್ಟಿದೆ. ಇದೇ ಏಪ್ರಿಲ್-14 ರಂದು ತೆರೆಗೆ ಬರಬೇಕಿದ್ದ ಆ ಚಿತ್ರ ಈಗ ಒಂದು ವಾರ ಮುಂದಕ್ಕೆ ಹೋಗಿದೆ.
ಶಾಹಿದ್ ಕಪೂರ್ ಅಭಿನಯದ ಜರ್ಸಿ ಚಿತ್ರದ ರಿಲೀಸ್ ಮುಂದೆ ಹೋಗಿದೆ. ಕೆಜಿಎಫ್02 ಚಿತ್ರ ರಿಲೀಸ್ ಆಗ್ತಿರೋದ್ರಿಂದ ಈ ಚಿತ್ರ ಪೋಸ್ಟ್ ಪೋನ್ ಆಗಿದೆ. ಏಪ್ರಿಲ್-14 ರ ಬದಲು ಏಪ್ರಿಲ್-22 ಕ್ಕೆ ಈ ಚಿತ್ರ ರಿಲೀಸ್ ಆಗುತ್ತಿದೆ.
ಈ ವಿಷಯವನ್ನ ಸಿನಿಮಾ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ ತಮ್ಮ ಟ್ವಿಟರ್ ಮೂಲಕ ರಿವೀಲ್ ಮಾಡಿದ್ದಾರೆ. ಅಂದ್ಹಾಗೆ ಏಪ್ರಿಲ್-13 ಬೀಸ್ಟ್ ಚಿತ್ರ ರಿಲೀಸ್ ಆಗುತ್ತಿದೆ. ಮರು ದಿನ ಏಪ್ರಿಲ್ 14 ರಂದು ಕೆಜಿಎಫ್-2 ರಿಲೀಸ್ ಆಗುತ್ತಿದ್ದು ಸಿನಿಪ್ರಿಯರಿಗೆ ಡಬಲ್,ಡಬಲ್ ಎಂಟರ್‌ಟೈನಮೆಂಟ್ ಸಿಗ್ತಾಯಿದೆ.
PublicNext
11/04/2022 03:12 pm