ಹೈದ್ರಾಬಾದ್: ಟಾಲಿವುಡ್‌ನ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮ ನಿರ್ದೇಶನದ ಡೇಂಜರ್ಸ್ ಚಿತ್ರದ ರಿಲೀಸ್ ಮುಂದಕ್ಕೆ ಹೋಗಿದೆ. ಚಿತ್ರದ ಕಂಟೆಂಟ್ ವಿಷಯಕ್ಕೇನೆ ಚಿತ್ರಮಂದಿರಗಳು ಚಿತ್ರ ಪ್ರರ್ದಶನಕ್ಕೆ ನಿರಾಕಿಸಿವೆ. ಈ ಕಾರಣಕ್ಕೆ ಇವತ್ತು ಚಿತ್ರ ರಿಲೀಸ್ ಆಗಿಯೇ ಇಲ್ಲ.
ಈ ಬಗ್ಗೆ ಚಿತ್ರದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ. ಈ ಒಂದು ಚಿತ್ರ ಲೆಸ್ಬಿಯನ್ ಥೀಮ್ ಇರೋ ಚಿತ್ರವೇ ಆಗಿದೆ. ಈ ಒಂದು ಕಾರಣಕ್ಕೇನೆ ಅನೇಕ ಚಿತ್ರಮಂದಿರಗಳು ಬಿಡುಗಡೆ ನಿರಾಕರಿಸಿವೆ. ಅದಕ್ಕೇನೆ ಚಿತ್ರದ ರಿಲೀಸ್ ದಿನ ಮುಂದಕ್ಕೆ ಹೋಗಿದೆ ಅಂತಲೇ ವರ್ಮಾ ಹೇಳಿಕೊಂಡಿದ್ದಾರೆ.
ಈ ವಿಚಾರವಾಗಿಯೇ ರಾಮ್ ಗೋಪಾಲ್ ವರ್ಮ್ ಒಂದು ವೀಡಿಯೋ ಮಾಡಿದ್ದಾರೆ. ಅದನ್ನ ತಮ್ಮ ಟ್ವಿಟರ್ ಪೇಜ್ ನಲ್ಲು ಹಂಚಿಕೊಂಡಿದ್ದಾರೆ.
PublicNext
08/04/2022 11:51 am