ಕನ್ನಡದ ಕಿರುತೆರೆಯಲ್ಲಿ ಪ್ರಸಾರವಾದ 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಮುಕ್ತಾಯಗೊಂಡಿದೆ. ತಾಯಿ ಯಶಸ್ವಿನಿ ಹಾಗೂ ಮಗಳು ವಂಶಿಕಾ ಅಂಜನಿ ಕಶ್ಯಪ ವಿನ್ನರ್ ಆಗಿ ಟ್ರೋಫಗಿಗೆ ಮುತ್ತಿಟ್ಟಿದ್ದಾರೆ.
ಈ ಶೋ ಆರಂಭದಿಂದಲೂ ತನ್ನದೇ ಆದ ವಿಶೇಷತೆಗಳಿಂದ ವೀಕ್ಷಕರ ಮನಗೆದ್ದಿತ್ತು. ಅದರಲ್ಲೂ ವಂಶಿಕಾ ಎಲ್ಲರ ಮನಗೆದ್ದಿದ್ದಳು ಅರಳು ಹುರಿದಂತೆ ಮಾತನಾಡುವ ಈ ಬಾರಿ ವಿನ್ನರ್ ಪಟ್ಟ ಸಿಗಲಿದೆ ಎಂದೇ ಎಲ್ಲರೂ ಊಹಿಸಿದ್ದರು.
ಸದ್ಯ ವೀಕ್ಷಕರು ಊಹೆ ನಿಜವಾಗಿದೆ. ಟ್ರೋಫಿ ಜೊತೆಗೆ 5 ಲಕ್ಷ ರೂ. ನಗದು ಬಹುಮಾನವನ್ನು ಈ ಅಮ್ಮ ಮಗಳು ಪಡೆದಿದ್ದಾರೆ.
PublicNext
04/04/2022 06:34 pm