ಬೆಂಗಳೂರು: ದಿವಂಗತ ನಾಯಕ ನಟ ಸಂಚಾರಿ ವಿಜಯ್ ಅಭಿನಯದ ತಲೆದಂಡ ಚಿತ್ರ ನಾಳೆ ಶುಕ್ರವಾರ ರಿಲೀಸ್ ಆಗುತ್ತಿದೆ. ಈಗಾಗಲೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಈ ಚಿತ್ರ ಮೆಚ್ಚುಗೇನೂ ಪಡೆದಿದೆ. ಈಗ ಥಿಯೇಟರ್ ಗೂ ಬರ್ತಾಯಿದೆ.
ಪ್ರವೀಣ್ ಕೃಪಾಕರ್ ನಿರ್ದೇಶನದ ಈ ಚಿತ್ರ ವಿಶೇಷವಾಗಿಯೇ ಇದೆ. ಕಂಟೆಂಟ್ ಬೇಸ್ ಸಿನಿಮಾ ಇದಾಗಿದ್ದು,ಸಂಚಾರಿ ವಿಜಯ್ ಈ ಚಿತ್ರದಲ್ಲಿ ಪರಿಸರ ಪ್ರೇಮಿ ಮುಗ್ಧ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶೇಷ ಪರಿಕಲ್ಪನೆಯ ಈ ಚಿತ್ರಕ್ಕೆ ಹರಿಕಾವ್ಯ ಅವರ ಸಂಗೀತ ನಿರ್ದೇಶನ ಇದೆ. ಚಿತ್ರದಲ್ಲಿ ಒಟ್ಟು 12 ಹಾಡುಗಳು ಇವೆ. ಆದರೆ ಎಲ್ಲವೂ ಬಿಟ್ ಸಾಂಗ್‌ಗಳೇ ಆಗಿವೆ. ಕಥೆ ಬಿಟ್ಟು ಯಾವುದೇ ಹಾಡೂ ಇಲ್ಲಿ ಇಲ್ಲವೇ ಇಲ್ಲ. ಒಟ್ಟಾರೆ, ನಾಳೆ ತಲೆದಂಡ ಚಿತ್ರ ರಿಲೀಸ್ ಆಗುತ್ತಿದೆ.
PublicNext
31/03/2022 07:42 pm