ಬೆಂಗಳೂರು: ಪ್ರಾಣಿ ಹಿಂಸೆ ತಡೆಗೆ ಕೇಂದ್ರ ಸರ್ಕಾರ ಪ್ರಾಣಿ ಹಿಂಸೆ ತಡೆಗೆ ಈ ಹಿಂದಿನ ಕಾಯ್ದೆಯನ್ನೆ ತಿದ್ದುಪಡೆ ಮಾಡಿದೆ. ಇದನ್ನ ತಿಳಿದಿರೋ ನಟಿ ರಮ್ಯಾ ಕೇಂದ್ರದ ಈ ಕಾರ್ಯಕವನ್ನ ಕೊಂಡಾಡಿದ್ದಾರೆ.
ನಟಿ ರಮ್ಯಾ ಪ್ರಾಣಿ ಪ್ರಿಯೆ.ಬೀದಿ ನಾಯಿಗಳ ಮೇಲೆ ಆಗೋ ಹಿಂಸೆಯನ್ನ ಖಂಡಿಸುತ್ತಲೇ ಇದ್ದಾರೆ. ಪ್ರಾಣಿಗಳ ಮೇಲಿನ ಕ್ರೌರ್ಯವನ್ನ ತಡೆಯಲು ಕೇಂದ್ರ ಸರ್ಕಾರ ಈ ಹಿಂದಿನ ಕಾಯ್ದೆಯನ್ನೇ ತಿದ್ದುಪಡಿ ಮಾಡಿದೆ. ಇದನ್ನ ತಿಳಿದು ತುಂಬಾ ಖುಷಪಟ್ಟಿರೋ ನಟಿ ರಮ್ಯಾ ಸೋಷಿಯಲ್ ಮೀಡಿಯಾ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೀನುಗಾರಿಕೆ,ಪಶುಸಂಗೋಪನೆ ಹಾಗೂ ಹೈನುಗಾರಿಕೆ ಸಚಿವಾಲಯ ಈಗ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ ಕೆಲವು ತಿದ್ದುಪಡಿ ತಂದಿದೆ. ದಂಡದ ಪ್ರಮಾಣವನ್ನೂ ಹೆಚ್ಚಿಸಿದೆ. ಈ ಹಿಂದೆ ಕೇವಲ 50 ರೂಪಾಯಿ ಇತ್ತು. ಈಗ ಅದು 5000 ದಿಂದ 50,000 ವರೆಗೂ ವಿಧಿಸಬಹುದಾಗಿದೆ.
PublicNext
30/03/2022 07:50 pm