ಬೆಂಗಳೂರು: ಕನ್ನಡದಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳು ರಿಲೀಸ್ ಆಗುತ್ತಿವೆ. ಕಳೆದ ಎರಡು ವಾರಗಳಲ್ಲಿ ಜೇಮ್ಸ್ ಚಿತ್ರ ತನ್ನ ಟ್ರೆಂಡ್ ಕ್ರಿಯೇಟ್ ಮಾಡಿ 100 ಕೋಟಿ ಬಾಕ್ಸ್ ಆಫೀಸ್ ಉಡೀಸ್ ಮಾಡಿದೆ. ಈಗ ಕೆಜಿಎಫ್ 2 ಟ್ರೈಲರ್ ಯೂಟ್ಯೂಬ್ ನಲ್ಲಿ ಭಾರಿ ಟ್ರೆಂಡ್ ಮಾಡಿದೆ.ಈ ಮಧ್ಯೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ರಿಲೀಸ್ ಗೆ ರೆಡಿ ಆಗಿದೆ.
ಏಪ್ರಿಲ್ 14 ರಂದು ಕೆಜಿಎಫ್ 2 ರಿಲೀಸ್ ಆಗುತ್ತದೆ.ಈ ವೇಳೆ ಕೆಜಿಎಫ್ ಗೆ ಹೆಚ್ಚು ಜನ ಲಗ್ಗೆ ಇಡೋ ಸಾಧ್ಯತೆ ಇದೆ.ಇದಕ್ಕೂ ಮುನ್ನ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ರಿಲೀಸ್ ಆಗ್ತಿದೆ.
ಏಪ್ರಿಲ್ 2 ರಿಂದ 13 ರ ವರೆಗೂ ವಿಕ್ರಾಂತ್ ರೋಣ ಹಣ ಬಾಚಿಕೊಳ್ಳಬಹುದು ಎಂಬ ಕಾರಣಕ್ಕೆ ಪ್ಲಾನ್ ಮಾಡಲಾಗಿದೆಯಾ ಎಂಬ ಅನುಮಾನಗಳು ಸಣ್ಣಗೆ ಹುಟ್ಟಿಕೊಳ್ಳುತ್ತಿವೆ.
ಯಾವುದೇ ಸಿನಿಮಾ ರಿಲೀಸ್ ಆದರೂ ಕಿಚ್ಚ ಸುದೀಪ್ ಅವರಿಗೆ ಅವರದ್ದೇ ಆದ ಸ್ಟ್ರಾಂಗ್ ಅಭಿಮಾನಿ ಬಳಗವಿದೆ. ಯಾವ ಚಿತ್ರ ಬಂದರೂ, ಹೋದರೂ ಕಿಚ್ಚ ಬಾಕ್ಸ್ ಆಫೀಸ್ ಉಡೀಸ್ ಮಾಡೋ ಎಲ್ಲಾ ಲಕ್ಷಣಗಳು ದಟ್ಟವಾಗುತ್ತಿದೆ. ಕೆಜಿಎಫ್ 2, ವಿಕ್ರಾಂತ್ ರೋಣ ಎರಡೂ ಕನ್ನಡ ಸಿನಿಮನಾಗಳೇ. ಹಾಗಾಗಿ ನಮ್ ಕಡೆ ಯಿಂದ ಎರಡೂ ಚಿತ್ರ ತಂಡಗಳಿಗೂ ಆಲ್ದಿ ಬೆಸ್ಟ್.
PublicNext
29/03/2022 03:44 pm