‘ವಿಕ್ರಾಂತ್ ರೋಣ’ ಚಿತ್ರದ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಗೆ ನಟ ಸುದೀಪ್ ಮಹಿಂದ್ರಾ ಥಾರ್ ಗಿಫ್ಟ್ ನೀಡಿದ್ದಾರೆ. ಈ ಫೋಟೋ ಹಂಚಿಕೊಂಡಿರುವ ಜಾನಿ ಅವರು ಕಿಚ್ಚನಿಗೆ ಧನ್ಯವಾದ ಹೇಳಿದ್ದಾರೆ. ‘ಕಿಚ್ಚ ಸುದೀಪ್ ನಿಮ್ಮ ಉಡುಗೊರೆಗಾಗಿ ಧನ್ಯವಾದಗಳು. ನೀವು ನನ್ನನ್ನು ನೋಡಿಕೊಳ್ಳುವ ರೀತಿ ನಿಜಕ್ಕೂ ಖುಷಿ ನೀಡಿದೆ. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ. ನನ್ನ ಜೀವನದಲ್ಲಿ ನೀವು ಇರುವುದಕ್ಕೆ ಖುಷಿ ಇದೆ’ ಎಂದು ಬರೆದುಕೊಂಡಿದ್ದಾರೆ ಜಾನಿ. ಮಹಿಂದ್ರಾ ಥಾರ್ಅನ್ನು ಸುದೀಪ್ ಗಿಫ್ಟ್ ಆಗಿ ನೀಡಿದ್ದಾರೆ.
ಜಾನಿ ಮಾಸ್ಟರ್ ಗೆ ಕನ್ನಡ ಚಿತ್ರರಂಗದ ಜತೆ ಒಳ್ಳೆಯ ನಂಟಿದೆ. ಪುನೀತ್ ನಟನೆಯ ‘ರಾಜಕುಮಾರ’, ‘ನಟಸಾರ್ವಭೌಮ’, ‘ಯುವರತ್ನ’ ಸಿನಿಮಾದ ಕೆಲ ಹಾಡುಗಳಿಗೆ ಜಾನಿ ಅವರು ಕೊರಿಯೋಗ್ರಫಿ ಮಾಡಿದ್ದಾರೆ.
‘ವಿಕ್ರಾಂತ್ ರೋಣ’ ಸಿನಿಮಾದಲ್ಲಿನ ಹಾಡಿಗೆ ಜಾನಿ ಅವರು ಡ್ಯಾನ್ಸ್ ಕೋರಿಯೋಗ್ರಫಿ ಮಾಡಿದ್ದಾರೆ. ‘ವಿಕ್ರಾಂತ್ ರೋಣ’ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ‘ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
PublicNext
25/03/2022 07:23 pm