ಚಿಕ್ಕಬಳ್ಳಾಪುರ: ರಾಜಮೌಳಿ ನಿರ್ದೇಶನದ ದಕ್ಷಿಣ ಭಾರತದ ಬಹು ನಿರೀಕ್ಷಿತ ಚಿತ್ರ RRR. ತೆಲುಗು ಚಿತ್ರರಂಗದ ದಿಗ್ಗಜ ನಾಯಕ ನಟರಾದ ಜ್ಯೂನಿಯರ್ ಎನ್‌ಟಿಆರ್ ಮತ್ತು ರಾಮ್‌ಚರಣ್ ಮುಖ್ಯಭೂಮಿಕೆಯಲ್ಲಿ ಚಿತ್ರ ಮೂಡಿಬಂದಿದೆ..
ಚಿಕ್ಕಬಳ್ಳಾಪುರದಲ್ಲಿ ನಿನ್ನೆ (ಶನಿವಾರ) ಏರ್ಪಡಿಸಲಾಗಿದ್ದ RRR ಚಲನಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, RRR ಚಿತ್ರದ ನಾಯಕ ನಟ ಜೂ. ಎನ್‌ಟಿಆರ್, ರಾಮ್‌ಚರಣ್, ನಿರ್ದೇಶಕ ರಾಜಮೌಳಿ ಜೊತೆಗೆ ಕನ್ನಡದ ನಟ ಶಿವರಾಜ್‌ಕುಮಾರ್ ಸೇರಿದಂತೆ ಸಾವಿರಾರು ಜನ ಅಭಿಮಾನಿಗಳು ಉಪಸ್ಥಿತರಿದ್ದರು.
PublicNext
20/03/2022 07:31 am