ಹೈದ್ರಾಬಾದ್: ಟಾಲಿವುಡ್ ನ ಬಾಹುಬಲಿ ಚಿತ್ರ ಖ್ಯಾತಿಯ ನಾಯಕ ಪ್ರಭಾಸ್ ಮದುವೆ ಬಗ್ಗೆ ಸದಾ ಚರ್ಚೆ ಆಗುತ್ತಲೇ ಇರುತ್ತದೆ. ಎಲ್ಲೇ ಹೋದ್ರೂ ನಿಮ್ಮ ಮದುವೆ ಯಾವಾಗ ಅಂತ ಪ್ರಭಾಸ್‌ಗೆ ಕೇಳೋರೇ ಹೆಚ್ಚು. ಅದನ್ನ ಕೇಳಿದವರಿಗೆ ಪ್ರಭಾಸ್ ಕಾರಣಗಳನ್ನ ಕೊಡ್ತಾನೇ ಇದ್ದಾರೆ. ಆ ಕಾರಣ ಏನೂ ಗೊತ್ತೇ ? ಬನ್ನಿ, ಹೇಳ್ತಿವಿ.
ಪ್ರಭಾಸ್ ಪ್ರೀತಿಯಲ್ಲಿ ಬಿದ್ದು ಸೋತು ಹೋಗಿದ್ದಾರೆಯೇ ? ಗೊತ್ತಿಲ್ಲ. ಆದರೆ, ಮದುವೆ ಬಗ್ಗೆ ಕೇಳುವ ಪ್ರಶ್ನೆಗೆ ಈಗ ಪ್ರಭಾಸ ಅಚ್ಚರಿಯ ಉತ್ತರವನ್ನೆ ಕೊಟ್ಟಿದ್ದಾರೆ.
ಹೌದು. ಪ್ರೀತಿಯ ಬಗ್ಗೆ ನನಗಿದ್ದ ನಂಬಿಕೆಗಳು ಹಲವು ಭಾರಿ ಸುಳ್ಳಾಗಿವೆ ಅಂತಲೇ ಹೇಳಿ ತಮ್ಮ ಫ್ಲಾಶ್ ಬ್ಯಾಕ್ ಲವ್ ಸ್ಟೋರಿ ಒಂದು ಸಣ್ಣ ಎಳೆಯನ್ನ ಬಿಟ್ಟುಕೊಟ್ಟಿದ್ದಾರೆ. ಆದರೆ ಎಲ್ಲೂ ನೇರವಾಗಿ ತಮ್ಮ ಪ್ರೀತಿ-ಪ್ರೇಮದ ಹಳೆ ಕಥೆಯನ್ನ ಹೇಳಿಕೊಂಡಿಲ್ಲ.
ಅಂದ್ಹಾಗೆ ಪ್ರಭಾಸ್ ಮತ್ತು ಪೂಜಾ ಹೆಗಡೆ ಅಭಿನಯದ ರಾಧೆಶ್ಯಾಮ್ ಚಿತ್ರ ಇದೇ ಮಾರ್ಚ್-11 ರಂದು ರಿಲೀಸ್ ಆಗುತ್ತಿದೆ. ಅದೇ ಪ್ರಚಾರದಲ್ಲಿದ್ದಾಗಲೇ ಪ್ರಭಾಸ್ ತಮ್ಮ ಮದುವೆ ಬಗೆಗಿನ ಪ್ರಶ್ನೆ ಎದುರಿಸಿದ್ದಾರೆ. ಅದಕ್ಕೆ ಅಚ್ಚರಿಯ ಉತ್ತರವನ್ನೂ ಕೊಟ್ಟುಬಿಟ್ಟಿದ್ದಾರೆ.
PublicNext
03/03/2022 03:16 pm