ಹೈದ್ರಾಬಾದ್:ಟಾಲಿವುಡ್‌ನಲ್ಲಿ ನಂದ ಮೂರಿ ಬಾಲಕೃಷ್ಣ ಅಂದ್ರೆ ಸಾಕು. ಬೆಳ್ಳಿ ತೆರೆ ಮೇಲಿನ ಆ ಗತ್ತು ಕಣ್ಮುಂದೆ ಬಂದು ನಿಲ್ಲುತ್ತದೆ. ಜೊತೆಗೆ ಈ ಸೂಪರ್ ಹೀರೋನ ಜೊತೆಗೆ ಅಭಿನಯಿಸೋಕೆ ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಯುವ ನಟಿ ಯೊಬ್ಬರು ಈ ನಟನ ಜೊತೆಗೆ ನಟಿಸಲು ನಾ ಒಲ್ಲೆ, ನಾ ಒಲ್ಲೆ ಅಂತ್ರವೆ. ಯಾಕೆ ಗೊತ್ತೇ ಬನ್ನಿ, ಹೇಳ್ತೀವಿ.
ಬಾಲಯ್ಯನ ಜೊತೆಗೆ ಅಭಿನಯಿಸೋ ಅವಕಾಶವನ್ನ ತಿರಸ್ಕರಿಸಿರೋ ನಟಿಯ ಹೆಸರು ಕೃತಿ ಶೆಟ್ಟಿ. ಬಹು ಬೇಗನೇ ಟಾಲಿವುಡ್‌ನಲ್ಲಿ ಒಂದ್ ರೇಂಜ್‌ಗೆ ಹೆಸರು ಮಾಡಿದ ನಟಿ ಈ ಕೃತಿ ಶೆಟ್ಟಿ. ಆದರೆ ಬಾಲಯ್ಯನ ಜೊತೆಗೆ ನಟಿಸೋಕೆ ಒಲ್ಲೆ ಅಂದಿದ್ದಾರೆ. ಅದಕ್ಕೆ ಕೃತಿ ಕೊಟ್ಟ ಕಾರಣ ಏನು ಗೊತ್ತೇ ?
ಹೌದು ! ವಯಸ್ಸಿನ ಅಂತರ. ನಿಜ, ಬಾಲಯ್ಯನಿಗೆ ಈಗ 61 ವರ್ಷ. ಕೃತಿಕ ಇನ್ನೂ 18 ವರ್ಷ. ಅದಕ್ಕೇನೆ ಪೇರ್ ಮ್ಯಾಚ್ ಆಗೋದಿಲ್ಲ ಅಂತಲೇ ಕೃತಿ ಶೆಟ್ಟಿ ಈ ಆಫರ್ ರಿಜೆಕ್ಟ್ ಮಾಡಿದ್ದಾರೆ ಅನ್ನೋ ಮಾಹಿತಿ ಟಾಲಿವುಡ್ ತುಂಬ ಹರಿದಾಡುತ್ತಿದೆ.
ಅಂದ್ಹಾಗೆ ಬಾಲಯ್ಯನ 107 ನೇ ಚಿತ್ರವನ್ನ ಗೋಪಿಚಂದ್ ಮಾಲಿನೇನಿ ನಿರ್ದೇಶನ ಮಾಡುತ್ತಿದ್ದಾರೆ. ಬಿಗ್ ಬಜೆಟ್‌ನ ಈ ಆಫರ್ ಬಿಟ್ಟಿರೋ ಕೃತಿ ಜಾಗಕ್ಕೆ ಯಾರ್ ಬರ್ತಾರೆ ಅನ್ನೋದೇ ಈಗೀನ ಕುತೂಹಲ.
PublicNext
02/03/2022 04:55 pm