ದುಬೈ: ಸಲ್ಮಾನ್ ಖಾನ್ ಅಭಿನಯದ ಕಿಕ್ ಚಿತ್ರದ ಜುಮ್ಮೆ ಕೀ ರಾತ್ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ. ಈ ಚಿತ್ರದ ಹಾಡಲ್ಲಿ ಸಲ್ಮಾನ್ ನಾಯಕಿಯ ಬಟ್ಟೆ ಅಂಚು ಹಿಡಿದು ಡ್ಯಾನ್ಸ್ ಅನ್ನ ಮಾಡ್ತಾರೆ. ಆದರೆ ಇದನ್ನೇ ದುಬೈನಲ್ಲಿ ಮಾಡೋಕೆ ಹೋಗಿ ಸಲ್ಮಾನ್ ಮುಜುಗರಕ್ಕೆ ಈಡಾಗಿದ್ದಾರೆ.
ಹೌದು! ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗಡೆ, ಕಿಕ್ ಚಿತ್ರದ ಜುಮ್ಮೆ ಕೀ ರಾತ್ ಹಾಡಿಗೆ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಇದೇ ವೇಳೆನೆ ಸಲ್ಮಾನ್ ಖಾನ್ ಪೂಜಾ ಹೆಗಡೆ ಧರಿಸಿದ್ದ ಬಟ್ಟೆಯ ಅಂಚನ್ನ ಬಾಯಲ್ಲಿ ಹಿಡಿದು ಇನ್ನೇನು ಡ್ಯಾನ್ಸ್ ಸ್ಟೆಪ್ ಮುಂದುವರೆಸಬೇಕು ಅನ್ನೋ ಹೊತ್ತಿಗೆ ಪೂಜೆ ಮುಂದೆ ಹೋಗಿ ಬಿಡ್ತಾರೆ.
ಇದರಿಂದ ಸಲ್ಮಾನ್ ಕೊಂಚ ಕಸಿವಿಗೊಳ್ತಾರೆ.ನಸು ನಕ್ಕು ಪೂಜಾ ಹಿಂದೆ ಹೋಗಿ ಕೊನೆಗೂ ಬಟ್ಟೆ ಅಂಚು ಬಾಯಲ್ಲಿ ಹಿಡಿದು ಡ್ಯಾನ್ಸ್ ಮಾಡಿಯೇ ಬಿಡ್ತಾರೆ. ಈ ದೃಶ್ಯದ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
PublicNext
28/02/2022 11:50 am