ಮುಂಬೈ: ಅಮೆರಿಕದ ಖ್ಯಾತ ಬಾಕ್ಸರ್ ಮೈಕ್ ಟೈಸನ್ ಬಗ್ಗೆ ಬಾಲಿವುಡ್ ನ ನವ ನಟಿ ಅನನ್ಯಾ ಪಾಂಡೆ ಕಾಮೆಂಟ್ ಮಾಡಿದ್ದಾರೆ. ಮೈಕ್ ಟೈಸನ್ ಒಬ್ಬ ಫನ್ನಿ ಮ್ಯಾನ್. ಈ ವ್ಯಕ್ತಿ ಒಂದು ರೀತಿ ಅತಿ 'ದೊಡ್ಡ ಟೆಡ್ಡಿ ಬೇರ್' ಅಂತಲೇ ವರ್ಣನೆ ಮಾಡಿದ್ದಾರೆ.
ಹೌದು! ಲೈಗರ್ ಅನ್ನೋ ಒಂದು ಚಿತ್ರದಲ್ಲಿ ಮೈಕ್ ಟೈಸನ್ ಮತ್ತು ಅನನ್ಯಾ ಪಾಂಡೆ ಕೆಲಸ ಮಾಡಿದ್ದಾರೆ. ಕೆಲಸ ಮಾಡುವ ವೇಳೆನೆ ತನಗಾದ ಅನುಭವವನ್ನ ಅನನ್ಯಾ ಈಗ ಹೇಳಿಕೊಂಡಿದ್ದಾರೆ.
ಮೈಕ್ ಟೈಸನ್ ಜೊತೆಗೆ ಕೆಲಸ ಮಾಡೋದರಲ್ಲಿ ಫನ್ ಇತ್ತು. ಟೈಸನ್ ಪಕ್ಕ ನಿಂತರೇ ಲಯನ್ ಬಳಿಯೇ ನಿಂತಿರೋ ಅನುಭವ ಆಗುತ್ತಿತ್ತು. ಆದರೆ ಮೈಕ್ ಒಂದು ರೀತಿ ಪ್ರೀತಿ ತುಂಬಿದ ಅತಿ 'ದೊಡ್ಡ ಟೆಡ್ಡಿ ಬೇರ್' ಅಂತಲೇ ಬಣ್ಣಿಸಿದ್ದಾರೆ.
PublicNext
22/02/2022 12:07 pm