ಬೆಂಗಳೂರು:ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ಕೊನೆಗೂ ಡಬ್ಬಿಂಗ್ ಕೆಲಸ ಪೂರ್ಣಗೊಂಡಿದೆ. ಹೌದು.
ಈ ಕೆಲಸವನ್ನ ಬೇರೆ ಯಾರೋ ಮಾಡಿಲ್ಲ. ಸ್ವತಃ ಶಿವರಾಜ್ ಕುಮಾರ್ ಸಹೋದರ ಪುನೀತ್ ಅಭಿನಯದ
ಜೇಮ್ಸ್ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ.
ಬೆಂಗಳೂರಿನ ಸ್ಟುಡಿಯೋ ಒಂದರಲ್ಲಿ ಇಡೀ ಸಿನಿಮಾಕ್ಕೆ ಶಿವರಾಜ್ ಕುಮಾರ್ ಡಬ್ಬಿಂಗ್ ಮಾಡಿದ್ದಾರೆ. ಹೆಚ್ಚು ಕಡಿಮೆ ಎರಡೂವರೆ ದಿನ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ ಶಿವರಾಜ್ ಕುಮಾರ್.
ಚಿತ್ರದ ಪುನೀತ್ ಪಾತ್ರಕ್ಕೆ ಶಿವರಾಜ್ ಕುಮಾರ್ ಧ್ವನಿ ಸೂಕ್ತವಾಗಿಯೇ ಇದೆ. ಪಾತ್ರಕ್ಕೆ ಮತ್ತಷ್ಟು ಜೀವಂತಿಕೆ ತಂದುಕೊಟ್ಟಿದೆ ಅಂತಲೇ ಚಿತ್ರದ ನಿರ್ದೇಶಕ ಚೇತನ್ PublicNext ಗೆ ತಿಳಿಸಿದ್ದಾರೆ.
PublicNext
02/02/2022 07:58 pm