ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡೈನಾಮಿಕ್ ದೇವರಾಜ್ ಹಿಂಗ್ಯಾಕ್ ಆದ್ರು ?

ಬೆಂಗಳೂರು:ಡೈನಾಮಿಕ್ ಸ್ಟಾರ್ ದೇವರಾಜ್ ಬಹುತೇಕ ಪೊಲೀಸ್ ಪಾತ್ರದ ಮೂಲಕವೇ ಗಮನ ಸೆಳೆದಿದ್ದಾರೆ. ಆರಂಭದಲ್ಲಿ ವಿಲನ್ ಪಾತ್ರಧಾರಿ ಆಗಿಯೂ ಮಿಂಚಿದ್ದಾರೆ.ಆದರೆ ಈಗ ಅದೇ ದೇವರಾಜ್ ಅವರು 'ಮಾನ' ಚಿತ್ರದಲ್ಲಿ ಭಾರಿ ಪ್ರಯೋಗ ಮಾಡಿದ್ದಾರೆ. ಬನ್ನಿ,ನೋಡೋಣ.

ದೇವರಾಜ್ ಮತ್ತು ಉಮಾಶ್ರೀ ಅಭಿನಯದ 'ಮಾನ' ಹೆಸರಿನ ಚಿತ್ರ ಭಾರಿ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿಯ ದೇವರಾಜ್ ಪಾತ್ರದವೇ ಅದಕ್ಕೆ ಪ್ರಮುಖ ಕಾರಣವೂ ಆಗಿದೆ. ಅದಕ್ಕೆ ಪೂರಕ ಅನ್ನೋ ಹಾಗೆ ನಟಿ ಉಮಾಶ್ರೀ ಅವರ ಪಾತ್ರವೂ ಇದೆ.

ಸಬಾಸ್ಟಿನ್ ಡೇವಿಡ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಕಾದಂಬರಿಕಾರ ಕುಂ. ವೀರಭದ್ರಪ್ಪನವರು ಬರೆದ ನೈಜಘಟನೆ ಕಥೆಯನ್ನೆ ಈ ಚಿತ್ರ ಆಧರಿಸಿದೆ.ಈ ಚಿತ್ರ ಪಳನಿ ಡಿ ಸೇನಾಧಿಪತಿ ಸಂಗೀತ ಈ ಚಿತ್ರಕ್ಕಿದೆ. ಅತ್ಯುತ್ತಮ ಕಲಾವಿದರನ್ನ ಹೊಂದಿದ ಈ ಚಿತ್ರದ ಟ್ರೈಲರ್ ಈಗ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.

Edited By :
PublicNext

PublicNext

02/02/2022 04:50 pm

Cinque Terre

31.32 K

Cinque Terre

0