ಬೆಂಗಳೂರು: ಇತ್ತಿಚೆಗೆ ತೆರೆ ಕಂಡು ಭರ್ಜರಿ ಪ್ರದರ್ಶನಗೊಂಡ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಸಿನಿ ರಸಿಕರ ಮನ ಗೆದ್ದಿದೆ ಮಾತ್ರವಲ್ಲದೆ ಯಾವುದೇ ಸಭೆ ಸಮಾರಂಭದಲ್ಲಿ ಶೀವಲ್ಲಿ ಸ್ಟೆಪ್ಸ್ ಫಿಕ್ಸ್ ಆಗಿಬಿಟ್ಟಿವೆ.
ಸದ್ಯ ಇಡೀ ಪ್ರಪಂಚದಲ್ಲೇ ಪುಷ್ಪ ಹವಾ ಎಬ್ಬಿಸಿದೆ. ದೇಶ-ವಿದೇಶದ ಸಾಮಾನ್ಯ ಜನರಿಂದ ಸ್ಟಾರ್ ಕ್ರಿಕೆಟಿಗರು ಸೇರಿದಂತೆ ಬಹುತೇಕ ಎಲ್ಲರಿಗೂ ಶೀವಲ್ಲಿ ಸ್ಟೆಪ್ಸ್ ಗೆ ಫಿದಾ ಆಗಿದ್ದಾರೆ.
ಸದ್ಯ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅಜ್ಜಿ ಇದೇ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಜ್ಜಿಗೆ ಹಾರ್ದಿಕ್ ಪಾಂಡ್ಯ ಸಾಥ್ ನೀಡಿದ್ದಾರೆ.
ಇನ್ನು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡ ಹಾರ್ದಿಕ್ ಪಾಂಡ್ಯ “ಅವರ್ ಓನ್ ಪುಷ್ಪಾ ನಾನಿ” ಎಂದು ಶೀರ್ಷಿಕೆ ಸೇರಿಸಿದ್ದಾರೆ.
PublicNext
26/01/2022 09:18 pm