ಮುಂಬೈ: ಡಿ.9 ರಂದು ಅದ್ಧೂರಿಯಾಗಿ ಮದುವೆಯಾದ ಬಾಲಿವುಡ್ ನ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಸದ್ಯ ಜೋಡಿ ತಮ್ಮ ಹನಿಮೂನ್ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮದುವೆಯಾದ ಮರುದಿನವೇ ಹನಿಮೂನ್ ಗೆ ಮಾಲ್ಡೀವ್ಸ್ ಗೆ ಹಾರಿದ್ದ ಜೋಡಿ ಭಾರತಕ್ಕೆ ವಾಪಸ್ಸಾದರು ಮಾಲ್ಡೀವ್ಸ್ ಡೈರಿಯ ಫೋಟೋ ಹಂಚಿಕೊಂಡಿರಲಿಲ್ಲ. ಈಗ ಕತ್ರಿನಾ ಅವರು ಹನಿಮೂನ್ ಫೋಟೋ ಹಂಚಿಕೊಂಡಿದ್ದಾರೆ.
ಮಾಲ್ಡೀವ್ಸ್ ಸಮುದ್ರ ತೀರದಲ್ಲಿ ನಿಂತಿರುವ ಚಿತ್ರವನ್ನು ಕತ್ರಿನಾ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಮೈ ಹ್ಯಾಪಿ ಪ್ಲೇಸ್ ಎಂದು ಅವರು ಹಾಕಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
ಕತ್ರಿನಾ ಕೈಫ್ ಲಂಡನ್ ಮೂಲದವರು. ಹಿಂದಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ನಂತರ ಅವರು ಭಾರತದಲ್ಲೇ ಸೆಟ್ಲ್ ಆಗಿದ್ದಾರೆ. ಈಗ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿ ಪಂಜಾಬ್ ನ ಸೊಸೆ ಆಗಿದ್ದಾರೆ.
PublicNext
24/01/2022 10:17 pm