ಬೆಂಗಳೂರು:ಡಾಕ್ಟರ್ ರಾಜ್‌ಕುಮಾರ್ ಅವರ ಪ್ರೇಮದ ಕಾಣಿಕೆ ಚಿತ್ರದ ಚಿ.ಉದಯಶಂಕರ್ ಬರೆದ ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡು ಎಲ್ಲ ಕಾಲಕಕ್ಕೂ ಸಲ್ಲುತ್ತದೆ. ಎಲ್ಲ ಸಮಯಕ್ಕೂ ಹೊಂದುವ ಅರ್ಥವನ್ನೇ ಈ ಗೀತೆ ಹೊಂದಿದೆ. ಇದೇ ಹಾಡನ್ನ ಈಗ ಕನ್ನಡದ ಯುವ ನಟಿ ಸಂಯುಕ್ತಾ ಬೆಳವಾಡಿ ಮತ್ತು ಅವರ ತಾಯಿ ಪೋಷಕ ನಟಿ ಸುಧಾ ಬೆಳವಾಡಿ ಹಾಡಿ ಖುಷಿಪಟ್ಟಿದ್ದಾರೆ.ವಿಶೇಷ ಅಂದ್ರೆ ಈ ವೀಡಿಯೋ ಸಂಯುಕ್ತಾ ಟ್ವಿಟರ್ ಪೇಜ್‌ನಲ್ಲಿಯೇ ಶೇರ್ ಆಗಿದೆ.ಎಲ್ಲರೂ ಇವರ ಈ ಗಾಯನವನ್ನ ಮೆಚ್ಚಿಕೊಳ್ಳುತ್ತಿದ್ದಾರೆ.
PublicNext
13/01/2022 03:38 pm