ಬಹುದಿನಗಳ ನಂತರ ನಟಿ ಅಮೂಲ್ಯ ಮತ್ತು ಅವರ ಗೆಳತಿಯರು ಭೇಟಿಯಾಗಿದ್ದಾರೆ. ಇನ್ನು ಇವರೆಲ್ಲ ಒಟ್ಟಿಗೆ ಕಾಣಿಸಿಕೊಂಡ ಕೆಲವು ಫೋಟೋಗಳನ್ನು ನಟಿ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ನಟಿ ಅಮೂಲ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜಗದೀಶ್ ಆರ್ ಚಂದ್ರ ಅವರನ್ನು ಮದುವೆಯಾದ ನಂತರ ಅವರು ನಟನೆಯಿಂದ ದೂರ ಉಳಿದ್ದಿದ್ದಾರೆ.
ಅಮೂಲ್ಯ, ವೈಷ್ಣವಿ ಜೊತೆಗೆ ಇನ್ನಿಬ್ಬರ ಫ್ರೆಂಡ್ಸ್ ಗ್ಯಾಂಗ್ ಇದೆ, ಅನೇಕ ವರ್ಷಗಳಿಂದ ಅವರೆಲ್ಲರೂ ಒಳ್ಳೆಯ ಸ್ನೇಹಿತರು. ಸಾಕಷ್ಟು ಸಭೆ, ಸಮಾರಂಭ, ಶೋಗಳಲ್ಲಿಯೂ ತಮ್ಮ ಸ್ನೇಹದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಅಮೂಲ್ಯ ಅವರು ಬಹುದಿನಗಳ ನಂತರದಲ್ಲಿ ಸ್ನೇಹಿತರ ಜೊತೆ ಹೊರಗಡೆ ಒಂದಷ್ಟು ಸಮಯ ಕಳೆದಿದ್ದಾರೆ. ಆ ಫೋಟೋಗಳನ್ನು ಇಲ್ಲಿವೆ ನೋಡಿ.
PublicNext
11/01/2022 10:42 pm