ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಾಪ್ ಟ್ರೆಂಡಿಂಗ್ ನಲ್ಲಿ #BoyCottPushpaInkarnataka -ಚಿತ್ರ ವಿತರಕರನ್ನ ಬೈತವ್ರೆ ನೆಟ್ಟಿಗರು

ಬೆಂಗಳೂರು: ಟಾಲಿವುಡ್‌ ನ ಪುಷ್ಪ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ಈ ಚಿತ್ರದ ತೆಲುಗು ವರ್ಶನ್ ಕರ್ನಾಟಕದಲ್ಲಿ 100 ಕ್ಕೂ ಹೆಚ್ಚು ಸ್ಕ್ರೀನ್ ರಿಲೀಸ್ ಆಗುತ್ತಿದೆ. ಆದರೆ ಕನ್ನಡದಲ್ಲಿ ಡಬ್ಬ ಆಗಿರೋ ಈ ಚಿತ್ರ ಕೇವಲ ಮೂರೇ ಮೂರು ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿದೆ. ಅದಕ್ಕೇನೆ #BoyCottPushpaInkarnataka ಹ್ಯಾಶ್ ಟ್ಯಾಗ್ ಈಗ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿಯೇ ಇದೆ.

ಹೌದು ಪುಷ್ಪ ಬಹುಭಾಷೆಯಲ್ಲಿಯೇ ರಿಲೀಸ್ ಆಗುತ್ತಿದೆ. ಬೇರೆ ಭಾಷೆಯಲ್ಲಿ ಈ ಚಿತ್ರ ಹೆಚ್ಚಿನ ಸ್ಕ್ರೀನ್‌ನಲ್ಲಿಯೇ ಪ್ರದರ್ಶನ ಕಾಣುತ್ತಿದೆ. ಆದರೆ ಕನ್ನಡ ಅಂತ ಬಂದ್ರೆ ಇದು ಕೇಲವ ಮೂರು ಥಿಯೇಟರ್‌ ನಲ್ಲಿಯೇ ರಿಲೀಸ್ ಆಗುತ್ತಿದೆ. ಅದಕ್ಕೇನೆ ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರದ ವಿರುದ್ಧ ಸಿಕ್ಕಾಪಟ್ಟೆ ಕಾಮೆಂಟ್ಸ್ ಬರುತ್ತಿವೆ.

#BoyCottPushpaInkarnataka ಅಂತೂ ಟ್ರೆಂಡಿಂಗ್ ನಲ್ಲಿಯೇ ಇದೆ. ಕೆಲವಂತೂ ಚಿತ್ರ ವಿತರಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆ ಕನ್ನಡಾಭಿಮಾನವೇ ಇಲ್ಲವೇ ಅಂತಲೂ ಕೇಳಿದ್ದಾರೆ.

Edited By :
PublicNext

PublicNext

16/12/2021 10:10 pm

Cinque Terre

27.53 K

Cinque Terre

1