ಬೆಂಗಳೂರು:ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮಕ್ಕಳ ವೀಡಿಯೋಗಳ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಅದೇ ರೀತಿನೇ ಮತ್ತೊಂದು ವೀಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ.
ಯಶ್ ಪುತ್ರಿ ಐರಾ ತುಂಬಾ ಚೂಟಿ ಆಗಿದ್ದಾಳೆ. ತಮ್ಮ ಯಥರ್ವ ಅಂದ್ರೆ ಈ ಪುಟ್ಟ ಐರಾಗೆ ಅದೇನೋ ಖುಷಿ. ಅದೇನೋ ಸಂತೋಷ.ಅದಕ್ಕೇನೆ ತಾನು ತಿನ್ನುತ್ತಿದ್ದ ತಿಂಡಿಯ ಪ್ಲೇಟ್ ನಿಂದಲೇ ತಮ್ಮನಿಗೆ ತಿಂಡಿ ತಿನ್ನಿಸಲು ಹೋಗ್ತಾಳೆ.
ಆದರೆ ಅಮ್ಮ ರಾಧಿಕಾ ಅದನ್ನ ತಡೆಯುತ್ತಾಳೆ. ಆದರೂ ಹಠ ಬಿಡದ ಐರಾ ಅದನ್ನ ಮುಂದುವರೆಸುತ್ತಾಳೆ. ಈ ವೀಡಿಯೋವನ್ನ ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲೂ ಪೋಸ್ಟ್ ಮಾಡಿದ್ದಾರೆ.ಅದೇ ಈ ಹಳೆ ವೀಡಿಯೋ ಈಗಲೂ ಗಮನ ಸೆಳೆಯುತ್ತಲೇ ಇದೆ.
PublicNext
14/12/2021 09:53 pm