ಚಂಡೀಗಢ : ವಿವಾದಾತ್ಮಕ ಹೇಳಿಕೆ ಕೊಡುತ್ತಲೇ ಸುದ್ದಿಯಲ್ಲಿರುವ ನಟಿ ಕಂಗನಾ ಕಾರಿನ ಮೇಲೆ ದಾಳಿ ನಡೆದಿದೆ. ಈ ಬಗ್ಗೆ ಅವರು ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಕಂಗನಾ ಅವರು ಇಂದು (ಡಿಸೆಂಬರ್ 3) ಪಂಜಾಬ್ ಗೆ ತೆರಳಿದ್ದರು. ರೈತ ಪ್ರತಿಭಟನಾಕಾರರ ವಿರುದ್ಧ ಕಂಗನಾ ಸಾಕಷ್ಟು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಬಂದಿರು ಕಾರಣಕ್ಕೆ ಅವರು ಪಂಜಾಬ್ ಗೆ ಎಂಟ್ರಿ ಪಡೆಯುತ್ತಿದ್ದಂತೆ ಅವರ ಕಾರಿನ ಮೇಲೆ ದಾಳಿ ನಡೆದಿದೆ. ಇದನ್ನು ಕಂಗನಾ ಖಂಡಿಸಿದ್ದಾರೆ.
ರೈತರನ್ನು ಭಯೋತ್ಪಾದಕರೆಂದು ಕರೆದಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಕೃಷಿ ಕಾಯ್ದೆಯ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯನ್ನು ವಿರೋಧಿಸಿದ ಕಂಗನಾ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭಯೋತ್ಪಾದಕರು, ಖಲಿಸ್ಥಾನಿಗಳು ಮತ್ತು ಸಮಾಜ ವಿರೋಧಿಗಳು ಎಂದು ಟೀಕಿಸಿದ್ದರು.
ಇದೇ ಕಾರಣಕ್ಕೆ ನಟಿ ಕಾರಿನ ಮೇಲೆ ದಾಳಿ ನಡೆದಿದ್ದತ್ತು ಈ ಕುರಿತು ಕುರಿತು ಕಂಗನಾ ತಮ್ಮ ಇನ್ ಗ್ರಾಂ ಖಾತೆಯಲ್ಲಿ ನನ್ನನ್ನು ಇಲ್ಲಿಯ ಗುಂಪೊಂದು ಸುತ್ತುವರಿದಿದ್ದು, ನನ್ನನ್ನು ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಬರೆದುಕೊಂಡಿದ್ದಾರೆ.
PublicNext
04/12/2021 03:04 pm