ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಪುನೀತ್ ರಾಜ್ ಕುಮಾರ್-ಅಶ್ವಿನಿ ವಿವಾಹ ವಾರ್ಷಿಕೋತ್ಸವ

ಬೆಂಗಳೂರು: ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಅವರದ್ದು ಇಂದು ವಿವಾಹ ವಾರ್ಷಿಕೋತ್ಸವ. ಆದರೆ ಅಪ್ಪು ಇಲ್ಲದ ಈ ದಿನ ಎಲ್ಲರಿಗೂ ತುಂಬಲಾರದ ನಷ್ಟ. ಪುನೀತ್ ಅಶ್ವಿನಿ ಅವರದ್ದು ಪ್ರೇಮ ವಿವಾಹ. ಪುನೀತ್ ಗೆ ಪತ್ನಿ ಮೇಲೆ ಅಪಾರ ಪ್ರೀತಿ ಇತ್ತು. ಅಶ್ವಿನಿ ಅವರಿಗೂ ಅಷ್ಟೇ ಪತಿಯನ್ನು ಕಂಡರೆ ಅತಿಯಾದ ಪ್ರೀತಿ. ಆದರೆ ವಿಧಿಯಾಟ ಇವರ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದು ದುರಂತ.

ಪುನೀತ್ ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾ ಕೆಲಸಗಳ ಮಧ್ಯೆಯೂ ಕುಟುಂಬಕ್ಕೆ ಸಮಯ ನೀಡುತ್ತಿದ್ದರು. ಅಶ್ವಿನಿ ಬಗ್ಗೆ ಅವರು ಎಷ್ಟು ಪ್ರೀತಿ ಇಟ್ಟುಕೊಂಡಿದ್ದರು ಎಂಬುದು ಸಾಕಷ್ಟು ಬಾರಿ ಸಾಬೀತಾಗಿತ್ತು. ಇಂದು (ಡಿಸೆಂಬರ್ 1) ಪುನೀತ್ ಹಾಗೂ ಅಶ್ವಿನಿ ಅವರ ವಿವಾಹ ವಾರ್ಷಿಕೋತ್ಸವ. ಅಪ್ಪು ಮದುವೆಗೆ ಇಂದಿಗೆ 22 ವರ್ಷ. ಪುನೀತ್ ಬದುಕಿದ್ದರೆ ಮನೆಯಲ್ಲಿ ಸಂಭ್ರಮ ಕಳೆಗಟ್ಟುತ್ತಿತ್ತು ಆದರೆ, ಅಪ್ಪು ಅಗಲಿಗೆ ನೋವಿನಲ್ಲೇ ದಿನಗಳಿಯುವಂತೆ ಮಾಡಿದೆ.

ಅಪ್ಪು ಅಭಿಮಾನಿಗಳು ನೋವಿನಲ್ಲೇ ಅಶ್ವಿನಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ. ‘ಅಶ್ವಿನಿ ಅಕ್ಕ, ಅಶ್ವಿನಿ ಅತ್ತಿಗೆ’ ಎಂದು ಕರೆಯುತ್ತಿರುವ ಅಭಿಮಾನಿಗಳು ‘ಅಪ್ಪು ಸರ್ ಅವರು ಇರಬೇಕಿತ್ತು. ನಿಮ್ಮ ನೋವನ್ನು ನಮಗೆ ಊಹಿಸಿಕೊಳ್ಳೋಕು ಕಷ್ಟ ಆಗ್ತಿದೆ. ಧೈರ್ಯವಾಗಿರಿ’ ಎಂದು ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

01/12/2021 07:51 pm

Cinque Terre

35.8 K

Cinque Terre

3