ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿದ್ದ ನಟಿ ಕಂಗನಾ, ಸಿಖ್ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಕಂಗನಾ ವಿರುದ್ಧ ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್ ಮೆಂಟ್ ಕಮಿಟಿ (ಡಿಎಸ್ ಜಿಎಂಸಿ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎನ್ನಲಾಗಿದೆ.
ಕಂಗನಾ ರಣಾವತ್ ಅವರು ಅತ್ಯುತ್ತಮ ನಟನಾ ಕೌಶಲ ಹೊಂದಿದ್ದಾರೆ. ಅದರೊಂದಿಗೆ ಜವಾಬ್ದಾರಿಯುತವಾಗಿ ಮಾತನಾಡಬೇಕು ಅವರು ಹೀಗೆ ಬೇಕಾಬಿಟ್ಟಿ ಮಾತನಾಡುವುದನ್ನು ನೋಡಿದ್ರೆ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಇಲ್ಲವೇ ಜೈಲಿಗೆ ಹಾಕಬೇಕು ಎಂದು ಮಾಜಿ ಶಾಸಕ ಹಾಗೂ ಶಿರೋಮಣಿ ಅಕಾಲಿ ದಳ (ಎಸ್ ಎಡಿ) ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಅವರು ವಾಗ್ದಾಳಿ ನಡೆಸಿದ್ದಾರೆ.
ಆಕೆಯನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಇಲ್ಲವೇ ಜೈಲಿಗೆ ಹಾಕಬೇಕು. ಇನ್ ಸ್ಟಾಗ್ರಾಂನಲ್ಲಿ ಅವರ ವಿರೋಧಾಭಾಸ ಹೇಳಿಕೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಿಂಗ್ ಅವರು ಟ್ವಿಟರ್ ನಲ್ಲಿ ಒತ್ತಾಯಿಸಿದ್ದಾರೆ.
PublicNext
21/11/2021 07:25 pm